Ticker

6/recent/ticker-posts

Ad Code

ಕೂಲಿ ಕಾರ್ಮಿಕ ತೀವ್ರ ಹೃದಯಾಘಾತಕ್ಕೆ ಬಲಿ

 


ಪೆರ್ಲ : ಕೂಲಿ ಕಾರ್ಮಿಕನೋರ್ವ ಕೆಲಸದ ನಡುವೆ ತೀವ್ರ ಹೃದಯ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಕಾಟುಕುಕ್ಕೆ ಸಮೀಪ ಮಿತ್ತೂರು ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಜಯಪ್ರಕಾಶ್  (53) ಎಂದು ಗುರುತಿಸಲಾಗಿದೆ. ಇವರ ಪತ್ನಿ ಎಣ್ಮಕಜೆ ಪಂಚಾಯತಿನ 4ನೇ ವಾರ್ಡಿನ ಪೆರ್ಲತ್ತಡ್ಕ ಅಂಗನವಾಡಿ ಅಧ್ಯಾಪಕಿ ಮೀನಾಕ್ಷಿಯಾಗಿದ್ದಾರೆ.ಮಕ್ಕಳು ಧನುಷ್, ಹೃತಿಕ್ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಪಂಚೆನಾಮೆ ನಡೆಸಲಾಗಿದೆ.

Post a Comment

0 Comments