Ticker

6/recent/ticker-posts

Ad Code

ಬೇಂಗಪದವು ನಿವಾಸಿ ಪ್ರಗತಿಪರ ಕೃಷಿಕ ಹೃದಯಾಘಾತದಿಂದ ನಿಧನ

 


ಪೆರ್ಲ : ಬೇಂಗಪದವು ಸಮೀಪದ ಕಲ್ಲರೋಡಿ ನಿವಾಸಿ ಪ್ರಗತಿಪರ ಕೃಷಿಕರಾಗಿದ್ದ ಲೂವಿಸ್ ಡಿಸೋಜ (76) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.  ನಿನ್ನೆ (ಸೆ.8) ಮೋಂತಿ ಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿದ್ದ ಇವರು ಇಂದು ಬೆಳಗ್ಗೆ ಅಸ್ವಸ್ಥರಾಗಿದ್ದು ತೀವ್ರ ಹೃದಯಾಘಾತಕ್ಕೊಳಗಾದರು. ಮೃತರು ಪತ್ನಿ ಸಿಸಿಲಿಯಾ ಡಿಸೋಜ,ಮಕ್ಕಳಾದ ಮ್ಯಾಕ್ಸಿಂ, ಪಂಜ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫಾಧರ್ ಮೇಲ್ವಿನ್, ಮಿಲ್ಟನ್ ಪೀಟರ್ (ಪೆರ್ಲ ಕಾರ್ತಿಕೇಯ ಟಯರ್ ರಿಟ್ರೆಡಿಂಗ್ ಕಂಪೆನಿ ಉದ್ಯೋಗಿ),ಸೊಸೆಯಂದಿರಾದ ಲವೀನ,ಪ್ರೀತಿಶಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ (ಬುಧವಾರ) ಬೆಳಗ್ಗೆ 10 ಗಂಟೆಗೆ ಮಣಿಯಂಪಾರೆ ಸೈಂಟ್ ಲಾರೆನ್ಸ್ ಚರ್ಚಿನಲ್ಲಿ ಜರಗಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

Post a Comment

0 Comments