Ticker

6/recent/ticker-posts

Ad Code

17 ನೇ ಉಪರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ, ರಾತ್ರಿಯೊಳಗೆ ಫಲಿತಾಂಶ ಪ್ರಕಟ ಸಾಧ್ಯತೆ


 ನವದೆಹಲಿ: ಜಗದೀಪ್ ಧನ್ಸರ್‌  ರಾಜೀನಾಮೆ ಬಳಿಕ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ. ಭಾರತದ 17ನೇ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಸಂಸತ್ ಭವನದಲ್ಲಿ ಮತದಾನ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿ ಒಕ್ಕೂಟದ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ಸ್ಪರ್ಧೆ ಇದೆ. ಜಗದೀಪ್ ಧನ್ವರ್‌ ಜುಲೈ 21ರಂದು ಅನಾರೋಗ್ಯ ಕಾರಣಗಳನ್ನು ನೀಡಿ ಹಠಾತ್ತನೆ ರಾಜೀನಾಮೆ ನೀಡಿದ ಕಾರಣ ಈಗ ಚುನಾವಣೆ ನಡೆಯುತ್ತಿದೆ.

        ಮತದಾನವು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಸುಧಾದಲ್ಲಿರುವ ಕೊಠಡಿ ಸಂಖ್ಯೆ F-101 ರಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ ಮತ ಚಲಾಯಿಸಲಿದ್ದಾರೆ.

ಲೋಕಸಭೆಯ 542,  ರಾಜ್ಯ ಸಭೆಯ 239 ಸದಸ್ಯರು ಸೇರಿ ಒಟ್ಟು 781 ಸದಸ್ಯರು ಇಂದಿನ ಮತದಾನದಲ್ಲಿ ಭಾಗವಹಿಸಬೇಕು. ಇದರಲ್ಲಿ ಕೇಂದ್ರ ಆಡಳಿತರೂ ಎನ್.ಡಿ.ಎ 427 ಸದಸ್ಯರನ್ನೂ, ವಿರೋಧ ಪಕ್ಷ ಇಂಡಿ ಮೈತ್ರಿ ಕೂಟ 324 ಸದಸ್ಯರನ್ನೂ ಹೊಂದಿದೆ.  ಬಿಜೆಡಿ, ಬಿ.ಆರ್.ಎಸ್, ಶಿರೋಮಣಿ ಅಕಾಲಿದಳ  ಎಂಬೀ ಪಕ್ಷಗಳ ಒಟ್ಟು 12  ಸದಸ್ಯರು ಮತದಾನದಲ್ಲಿ ಭಾಗವಹಿಸುವುದಿಲ್ಲ. ಇಂದು ರಾತ್ರಿ ಅತವಾ ನಾಳೆ ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದೆ

Post a Comment

0 Comments