Ticker

6/recent/ticker-posts

Ad Code

ಅಡ್ಯನಡ್ಕ ಕೇಪು ವಲಯ ಕ್ರೀಡಾ ಕೂಟ ಹಾಗೂ ವಾರ್ಷಿಕೋತ್ಸವ

 


ಅಡ್ಯನಡ್ಕ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡ್ಯನಡ್ಕ ಕೇಪು ವಲಯದ ಕ್ರೀಡಾ ಕೂಟ ಹಾಗೂ ವಾರ್ಷಿಕೋತ್ಸವ  ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಿತು.ಜನತ ಪದವಿ ವಿದ್ಯಾ ಸಂಸ್ಥೆಯ ಸಂಚಾಲಕಿ ಡಾ.ಆಶ್ವಿನಿ ಕೃಷ್ಣಮೂತ್ತಿ ಉದ್ಘಾಟಿಸಿದರು.ವಲಯ ಅಧ್ಯಕ್ಷ ಗಣೇಶ ಮೈರುವ ಅಧ್ಯಕ್ಷತೆ  ವಹಿಸಿದರು. ವಿಟ್ಲ ತಾಲೂಕು ಯೋಜನಾಧಿಕಾರಿ ಯೋಜನೆಯ ಬಗ್ಗೆ ಧರ್ಮಸ್ಥಳದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು ವೇದಿಕೆಯಲ್ಲಿ ಶಿಕ್ಷಕರಾದ ವಿಠಲ.ಜಿ, ವಲಯ ಮೇಲ್ವಿಚಾರಕ ಚಂದ್ರಶೇಖರ, ಒಕ್ಕೂಟದ ಅಧ್ಯಕ್ಷ ಪುಷ್ಪಕರ ರೈ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಗಾಯತ್ರಿ ಒಕ್ಕೂಟದ ಸಾಧನ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ,ಪಿಯುಸಿ, ಡಿಗ್ರಿ ಯಲ್ಲಿ ಅತ್ಯದಿಕ  ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು  ಆಶಾ ಕಾರ್ಯಕರ್ತೆಯಾಗಿ ನಿವೃತ್ತಿ ಹೊಂದಿದ ಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು . ನಿಕಟ ಪೂರ್ವ ಅಧ್ಯಕ್ಷರನ್ನು ಗೌರವಿಸಲಾಯಿತು.

ಸುವಿಧಾ ಕಾರ್ಯಕರ್ತೆಯನ್ನು ಗೌರವಿಸಲಾಯಿತು. ನಂತರ ಆಟೋಟ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.

ಅಧ್ಯಕ್ಷರಾದ ಪುಷ್ಪಕರರವರು ವಂದಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿದರು. ಭಾಗ್ಯಶ್ರೀ ತಂಡದ ಸದಸ್ಯರು ಪ್ರಾರ್ಥನೆಗೈದರು.

Post a Comment

0 Comments