ತಿರುವನಂತಪುರ: ದಕ್ಷಿಣ ಕೇರಳದ ವಿವಿಧ ಕಡೆಗಳಲ್ಲಿ ಇಂದು ಸಿಡಿಲು ಸಹಿತ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪುಳ, ಕೊಟ್ಟಯಂ, ಇಡುಕ್ಕಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯಂತೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. 24 ಗಂಟೆಗಳಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ಮಳೆ ಸಾಧ್ಯತೆಯಿದೆ. ಶಬರಿಮಲೆಯಲ್ಲಿ ಇಂದು ಹಾಗೂ ನಾಳೆ ಬಿರುಸಿನ ಮಳೆ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

0 Comments