ಉಪ್ಪಳ : ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಉಪ್ಪಳದ ಮಾಸ್ಟರ್ ಕಂಪ್ಯೂಟರ್ ಸಂಸ್ಥೆ ಯ ಕಲಿಕಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯನ್ನು ಸಂದರ್ಶಿಸಿ ತಾವು ತಯಾರಿಸಿದ ಕರಕುಶಲ ವಸ್ತುಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೀಡಿ ಖುಷಿ ಪಡಿಸಿದರು. ಮಂಜೇಶ್ವರ ಬಿ.ಆರ್. ಸಿ. ಯ ಬಿ.ಪಿ.ಸಿ ಸುಮಾದೇವಿಯವರು ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಯವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮಾಸ್ಟರ್ ಕಂಪ್ಯೂಟರ್ ಸಂಸ್ಥೆಯ ನಿರ್ದೇಶಕ ಶಫೀಕ್ ಶುಭ ಹಾರೈಸಿ ಕಾಗದದಿಂದ ಮಾಡಿದ ವಸ್ತುಗಳನ್ನು ನೀಡುವುದರ ಮೂಲಕ ಮಕ್ಕಳ ಸಂತಸದಲ್ಲಿ ಭಾಗಿಯಾದರು.. ಬಿ. ಆರ್. ಸಿ ಯ ಟ್ರೈನರ್ ಸುಮಯ್ಯ, ಶಿಕ್ಷಕಿ ಆಯುಷತ್ ಸೈನಾಜ್, ಮಾಸ್ಟರ್ ಕಂಪ್ಯೂಟರ್ ಸಂಸ್ಥೆಯ ಶಿಕ್ಷಕಿಯರಾದ ಸುನೀತ ಅನಿಶಾ, ಸುಜಾತ ಮತ್ತು ಶಾಲಾ ಎಂ. ಪಿ. ಟಿ .ಎ ಉಪಾಧ್ಯಕ್ಷೆ ಶ್ರೀಮತಿ ಪಾತಿಮತ್ ಝಹಿದ ಉಪಸ್ಥಿತರಿದ್ದು ಶುಭ ಹಾರೈಸಿದರು. ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳು ನಾನಾ ರೀತಿಯ ನೆಹರು ಟೋಪಿಯನ್ನು ನಿರ್ಮಿಸಿದರು. ಸಮಾರೋಪದಲ್ಲಿ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಲಾಯಿತು. ಶಿಕ್ಷಕಿ ಅನುಕೃಷ್ಣ ಸ್ವಾಗತಿಸಿ, ಐಶ್ವರ್ಯ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ನಿರ್ವಹಿಸಿದರು.

0 Comments