ಫುಟ್ ಬಾಲ್ ಸಂಬಂದ ಉಂಟಾದ ಜಗಳವನ್ನು ಮಾತುಕತೆ ಮೂಲಕ ಮುಗಿಸಲು ಬಂದ ಯುವಕ ಕತ್ತಿ ಇರಿತದಿಂದಾಗಿ ಮೃತಪಟ್ಟ ಘಟನೆ ನಡೆದಿದೆ. ತಿರುವನಂತಪುರಂ ರಾಜಾಜಿನಗರ ನಿವಾಸಿ ಅಲನ್(19) ಮೃತಪಟ್ಟ ಯುವಕ. ನಿನ್ನೆ (ಸೋಮವಾರ) ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ತೈಕಾಡ್ ನಿವಾಸಿಯಾದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಜಗದಿ ಕಾಲನಿ- ಚೆಂಗಲ್ ಚೂಳ ಎಂಬ ಫುಟ್ ಬಾಲ್ ತಂಡದ ಸದಸ್ಯರೊಳಗೆ ಜಗಳ ಉಂಟಾಗಿತ್ತು. ಸುಮಾರು 30 ರಷ್ಟು ಮಂದಿ ಸೇರಿದ್ದ ಜಗಳ ಮುಗಿಸಲು ಅಲನ್ ತಲುಪಿದ್ದ. ವಿಷಯ ಪ್ರಸ್ತಾಪದ ನಡುವೆ ಓರ್ವ ಕತ್ತಿಯಿಂದ ಅಲನ್ ಗೆ ಇರಿದನೆನ್ನಲಾಗಿದೆ. ಗಂಭೀರ ಗಾಯಗೊಂಡ ಅಲನ್ ನನ್ನು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.

0 Comments