Ticker

6/recent/ticker-posts

Ad Code

ಜುಗಾರಿ ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಸೆರೆ, 5350 ರೂ.ವಶ


 ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು  ಬಳಿ ಜುಗಾರಿ ನಿರತರಾಗಿದ್ದ 7 ಮಂದಿಯನ್ನು ಬದಿಯಡ್ಕ ಎಸ್.ಐ.ರೂಪೇಶ್ ನೇತೃತ್ವದ ತಂಡ ಬಂಧಿಸಿದೆ. ಆಟಕ್ಕೆ ಬಳಸಿದ 5350 ರೂ.ವಶಪಡಿಸಲಾಗಿದೆ. ಅರಂತೋಡು ನಿವಾಸಿ ತೇಜಸ್ ಕುಮಾರ್(33), ಮಾನ್ಯ ದೇವರಕೆರೆ ಬಳಿಯ ವಿಜಯನ್(40), ಪಾಡಿ ಒಡಂಬಳದ ಗಿರೀಶ್(35), ಅಜಕ್ಕೋಡು ನಿವಾಸಿ ಸುನಿಲ್ ಕುಮಾರ್(34), ಕೋಟೂರು ನಿವಾಸಿ ತಾರನಾಥ(39), ಬೆಳ್ಳಿಪ್ಪಾಡಿ ನಿವಾಸಿ ಅಹಮದ್ ಮಜೀದ್(29), ಮಾನ್ಯ ದೇವರೆಕೆರೆ ಬಳಯ ಅಜಿತ್(27) ಬಂಧಿತರು‌. ನಿನ್ನೆ (ಸೋಮವಾರ) ಸಾಯಂಕಾಲ 6.45 ರ ವೇಳೆ ಪೊಲೀಸರ ದಾಳಿ ನಡೆದಿದೆ.

Post a Comment

0 Comments