Ticker

6/recent/ticker-posts

Ad Code

ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್, ಲಕ್ಷ್ಮಣ ರೇಖೆ ಎಳೆದ ಪ್ರಾಧಿಕಾರ

 



ಕಾಸರಗೋಡು: ರಾಷ್ಟ್ರೀಯ ಜೆದ್ದಾರಿಯ ಎರಡೂ ಭಾಗಗಳಲ್ಲಿನ ಸರ್ವೀಸ್ ರಸ್ತೆಯಲ್ಲಿ ಅನಧಿಕೃತ ವಾಹನ ನಿಲುಗಡೆ ಜನರಿಗೆ ಸಮಸ್ಯೆ ಸೃಷ್ಟಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವೀಸ್ ರಸ್ತೆಗಳಲ್ಲಿ ಲಕ್ಷ್ಮಣರೇಖೆ ರಚಿಸಿದೆ. ಸರ್ವೀಸ್ ರಸ್ತೆಯಲ್ಲಿ ಇನ್ನು ಮುಂದೆ ತೀವ್ರ ಪೊಲೀಸ್ ತಪಾಸಣೆಯಿದ್ದು ಅನಧಿಕೃತ ಪಾರ್ಕಿಂಗ್ ವಿರುದ್ದ ಕಠಿಣ ‌ಕ್ರಮ ಉಟಾಗಲಿದೆ.

   ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿ ಪೂರ್ಣಗೊಂಡ ತಲಪಾಡಿ- ಚೆಂಗಳ ರೀಚ್ ನಲ್ಲಿ ಸರ್ವೀಸ್ ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ವ್ಯಾಪಕವಾಗಿದೆ. ಕೆಲವೊಮ್ಮೆ ರಸ್ತೆಯ ಬದಿಯಲ್ಲಿರುವ ಕಾಲುದಾರಿಯಲ್ಲೂ ಸಹ ಪಾರ್ಕಿಂಗ್ ಮಾಡಲಾಗುತ್ತದೆ. ಇದು ಪಾದಾಚಾರಿಗಳಿಗೆ, ಸರ್ವೀಸ್ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ  ಬಿಳಿ ಬಣ್ಣದ ಗೆರೆ ಎಳೆಯಲಾಗಿದೆ. ಜಿಲ್ಲೆಯ ಇತರ ಸರ್ವೀಸ್ ರಸ್ತೆಯಲ್ಲಿನ ಅನಧಿಕೃತ ಪಾರ್ಕಿಂಗ್ ವಿರುದ್ದವೂ ಕ್ರಮ ಉಂಟಾಗಲಿದೆ.

Post a Comment

0 Comments