Ticker

6/recent/ticker-posts

Ad Code

ಸರ್ವೀಸ್ ರಸ್ತೆ ದಾಟುವಾಗ ಗೂಡ್ಸ್ ಟೆಂಪೊ ಡಿಕ್ಕಿಯಾಗಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

 

ಪಡುಬಿದ್ರೆಯಲ್ಲಿ ಮಂಗಳೂರು ಕಡೆ ಹೋಗುವ ಸರ್ವೀಸ್  ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಗೂಡ್ಸ್ ಟೆಂಪೊ ಡಿಕ್ಕಿಯಾಗಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಪಡುಬಿದ್ರಿ ನಡ್ನಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ (22) ಮೃತಪಟ್ಟ ಯುವತಿಯಾಗಿದ್ದಾಳೆ.  ವಾಮಂಜೂರಿನ ಕರಾವಳಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪ್ರೇಕ್ಷಾ ಪರೀಕ್ಷೆ ಮುಗಿಸಿ ಮನೆಯತ್ತ ಹೊರಟಿರುವಾಗ ಅಪಘಾತ ನಡೆದಿತ್ತು‌. ಸಾರ್ವಜನಿಕರು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು. ತೀರಾ ಬಡ ಕುಟುಂಬದ ಆಕೆ ತಂದೆಯನ್ನು ಕಳೆದುಕೊಂಡಿದ್ದರು. ಅವರಿಗೆ ತಾಯಿ, ಸಹೋದರ ಇದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments