ಕಾಸರಗೋಡು : ಬೆಳ್ಳಂಬೆಳಗ್ಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಯುವಕನೊಬ್ಬನಿಗೆ ಎದುರು ಬಂದ ಕಾಡು ಹಂದಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಮುಳಿಯಾರ್ ಪಂಚಾಯತ್‌ನ ನುಸ್ರತ್ ನಗರದಲ್ಲಿ ಈ ಘಟನೆ ನಡೆದಿದ್ದು ಸೋಮವಾರ ಬೆಳಿಗ್ಗೆ ಮಸೀದಿಗೆ ಹೋಗುತ್ತಿದ್ದ ಯುವಕನ ಮೇಲೆ ಕಾಡುಹಂದಿ ದಾಳಿ ಮಾಡಿದೆ. ಚಟ್ಟಂಚಾಲ್ ತೆಕ್ಕಿಯ ಮುತ್ತಲಿಬ್ (42) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿದ್ದ ಇವರಿಗೆ ಕಾಡುಹಂದಿಗಳ ಹಿಂಡು ಎದುರಾಗಿತ್ತು.

0 Comments