ನೀರ್ಚಾಲು : ಕುಂಬಳೆ ಉಪಜಿಲ್ಲಾ ವಿವಿಧ ಮೇಳಗಳಲ್ಲಿ ಕಿಳಿಂಗಾರು ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವೃತ್ತಿಪರಿಚಯ ಮೇಳದಲ್ಲಿ ಮೂರನೇ ತರಗತಿಯ ವೈಷ್ಣವ್ ಭಟ್ ಬುಕ್ ಬೈಂಡಿಂಗ್ ನಲ್ಲಿ ದ್ವಿತೀಯ ಸ್ಥಾನ, ನಾಲ್ಕನೇ ತರಗತಿಯ ವಿಜೇಶ್ ಆವೆಮಣ್ಣಿನ ಆಕೃತಿ ನಿರ್ಮಾಣದಲ್ಲಿ ತೃತೀಯ ಸ್ಥಾನ, ಸಾನ್ವಿ ಎ ಒರಿಗಾಮಿ ಯಲ್ಲಿ ಎ ಗ್ರೇಡ್, ನಂದನ ಎಂ ಪೇಪರ್ ಕ್ರಾಫ್ಟ್ ನಲ್ಲಿ ಎ ಗ್ರೇಡ್, ಬಿನೋಯ್ ಡಿ ಸೋಜಾ ವೆಜಿಟೇಬಲ್ ಪ್ರಿಂಟಿಂಗ್ ನಲ್ಲಿ ಎ ಗ್ರೇಡ್, ಧ್ಯತಿ ಯನ್ ಆರ್ ಫ್ಯಾಬ್ರಿಕ್ ಪೇಯಿಂಟಿಂಗ್ ನಲ್ಲಿ ಎ ಗ್ರೇಡ್, ಧನ್ವಿ ಎಸ್ ಕೆ ಬೀಡ್ಸ್ ವರ್ಕ್ ನಲ್ಲಿ ಎ ಗ್ರೇಡ್, ಲಶಿತ್ ಪಿ ಕೆ ಪೋಟ್ರಿ ಪೇಂಟಿಂಗ್ ನಲ್ಲಿ ಎ ಗ್ರೇಡ್. ಗಣಿತ ಮೇಳದಲ್ಲಿ ನಂಬರ್ ಚಾರ್ಟಿನಲ್ಲಿ ಸಿಂಚನ ಲಕ್ಷ್ಮಿ ಎ ಗ್ರೇಡ್ ಹಾಗೂ ಜಿಯೋಮೆಟ್ರಿಕ್ ಚಾರ್ಟಿನಲ್ಲಿ ನವ್ಯಶ್ರೀ ಎ ಗ್ರೇಡ್ ಪಡೆದಿರುತ್ತಾರೆ .ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಚಾರ್ಟ್ ಬರೆಯುವುದರಲ್ಲಿ ನಾಲ್ಕನೇ ತರಗತಿಯ ಅಕ್ಷಯ್ ಹಾಗೂ ವೈಭವಿ ಎ ಗ್ರೇಡ್, ಸಮಾಜ ವಿಜ್ಞಾನ ಮೇಳದಲ್ಲಿ ನಾಣ್ಯಗಳ ಸಂಗ್ರಹದಲ್ಲಿ ಮೂರನೇ ತರಗತಿಯ ವೈಶಾಲಿ ಕೆ.ಎಂ ಹಾಗೂ ಯಜ್ಞೇಶ್ ಎ ಗ್ರೇಡ್ ಪಡೆದಿರುತ್ತಾರೆ .
ಮುಳ್ಳೇರಿಯಾ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಎಲ್. ಪಿ ವಿಭಾಗ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಮೂರನೇ ತರಗತಿಯ ವೈಷ್ಣವ್ ಭಟ್ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಒಗಟು ಸ್ಪರ್ಧೆಯಲ್ಲಿ ಹಾಗೂ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯ ಸಿಂಚನ ಲಕ್ಷ್ಮಿ ಎ ಗ್ರೇಡ್, ಎಲ್. ಪಿ ವಿಭಾಗ ದೇಶಭಕ್ತಿಗೀತೆಯಲ್ಲಿ ಸಿಂಚನ ಲಕ್ಷ್ಮಿ ಮತ್ತು ಬಳಗ (ನವ್ಯಶ್ರೀ, ನಂದನ ಯಂ, ವೈಭವಿ ಪಿ, ತನ್ವಿಕಾ ಎ, ಪ್ರತೀಕ್ಷ ಎ , ಸಾನ್ವಿ ಎ ) ಎ ಗ್ರೇಡ್, ಇಂಗ್ಲೀಷ್ ಅಭಿನಯ ಗೀತೆಯಲ್ಲಿ ಒಂದನೇ ತರಗತಿಯ ಸ್ವಸ್ತಿಕ್ ಶರ್ಮ ಎ ಗ್ರೇಡ್, ಕನ್ನಡ ಅಭಿನಯ ಗೀತೆಯಲ್ಲಿ ಎರಡನೇ ತರಗತಿಯ ಧನ್ವಿ ಎಸ್ ಕೆ ಎ ಗ್ರೇಡ್, ಕಥೆ ಹೇಳುವ ಸ್ಪರ್ಧೆಯಲ್ಲಿ ಎರಡನೇ ತರಗತಿಯ ಲಶಿತ್ ಪಿ ಕೆ ಎ ಗ್ರೇಡ್, ಮಲೆಯಾಳಂ ಕಂಠಪಾಠದಲ್ಲಿ ನಾಲ್ಕನೇ ತರಗತಿಯ ನಂದನ ಯಂ ಎ ಗ್ರೇಡ್ ,ಲಘು ಸಂಗೀತ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯ ವಿಜೇಶ್ ಎ ಗ್ರೇಡ್, ಮಲೆಯಾಳಂ ಅಭಿನಯ ಗೀತೆಯಲ್ಲಿ ಎರಡನೇ ತರಗತಿಯ ದಿಲ್ ಶಾ ಉಷಾಂತ್ ಎ ಗ್ರೇಡ್ ಪಡೆದಿರುತ್ತಾರೆ. ವಿಜೇತರನ್ನು ಶಾಲಾ ವ್ಯವಸ್ಥಾಪಕರು, ಶಾಲಾ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃಸಂಘಗಳು ಅಭಿನಂದಿಸಿವೆ.

0 Comments