Ticker

6/recent/ticker-posts

Ad Code

ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಎಸ್‌. ಆರ್‌. ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಆಯ್ಕೆ

 

ಮಂಗಳೂರು : ಕರ್ನಾಟಕ ಹಾಗೂ ಕೇರಳ ರಾಜ್ಯದ ಕೃಷಿಕರ ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಎಸ್‌. ಆರ್‌.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಅವರು ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರಾದ ಸತೀಶ್ಚಂದ್ರ ಅವರು ಸಹಕಾರಿ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಇವರು 2015-2020 ರ ಅವಧಿಯಲ್ಲಿ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ನಿರ್ಗಮಿತ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕಾಸರಗೋಡಿನ ಪಟ್ಟಾಜೆ-ಬದಿಯಡ್ಕ ಮೂಲದ ಪ್ರಗತಿಪರ ಕೃಷಿಕರಾದ ಪದ್ಮರಾಜ್ ಪಟ್ಟಾಜೆ ಅವರು ದೀರ್ಘಕಾಲದಿಂದ ಸಹಕಾರಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಸತತ ಎರಡು ಅವಧಿಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಡಿ.2ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.19 ನಿರ್ದೇಶಕರ ಪೈಕಿ ಕೇರಳದ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಕರ್ನಾಟಕದ 10 ನಿರ್ದೇಶಕರಲ್ಲಿ 4 ಮಂದಿ ಅವಿರೋಧವಾಗಿ ಮತ್ತು 6 ಮಂದಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರು.

Post a Comment

0 Comments