Ticker

6/recent/ticker-posts

Ad Code

ಉಪಜಿಲ್ಲಾ ಕಲೋತ್ಸವದಲ್ಲಿ ಶೇಣಿ ಶಾಲೆಗೆ ಯುಪಿ ಜನರಲ್ ಹಾಗೂ ಎಲ್ ಪಿ ಅರಬಿಕ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ-ವಿಜಯೋತ್ಸವ ಮೆರವಣಿಗೆ

 

ಪೆರ್ಲ : ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಯುಪಿ ಜನರಲ್ ವಿಭಾಗದಲ್ಲಿ ಹಾಗೂ ಎಲ್ ಪಿ ವಿಭಾಗದ ಅರಬಿಕ್ ಸ್ಪರ್ಧೆಗಳಲ್ಲಿ ಸಮಗ್ರ ಬಹುಮಾನಕ್ಕೆ ಪಾತ್ರವಾದ ಶೇಣಿ ಶ್ರೀ ಶಾರದಾಂಬ ಶಾಲಾ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು. ಕಲೋತ್ಸವದಲ್ಲಿ ಎಲ್ ಪಿ ಜನರಲ್ ದ್ವಿತೀಯ, ಯುಪಿ ವಿಭಾಗದ ಕಥಾ ಪ್ರಸಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಜಿಲ್ಲೆಗೆ ಆಯ್ಕೆಯಾದ ಅವ್ವ ಅಮ್ನ, ಕುಂಬಳೆ ಉಪಜಿಲ್ಲಾ ಯುಪಿ ಐಟಿ ಮೇಳ ಪ್ರಥಮ,  ಶಾಸ್ತ್ರೋತ್ಸವ ಎಲ್ ಪಿ. ವಿಭಾಗದ ಮೋಜಿನ ಗಣಿತ ಮೊಹಮ್ಮದ್ ನಾಝಿ ಪ್ರಥಮ, ಯುಪಿ ವಿಭಾಗದ ಐಟಿ ಮೇಳ ಮಲೆಯಾಳ ಟೈಪಿಂಗ್ ಯೂಸಫ್ ರಹೀಸ್ ಪ್ರಥಮ ಹಾಗೂ ಭಾಗವಹಿಸಿ ಎಗ್ರೆಡ್ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್, ಸಹಾಯಕ ಮುಖ್ಯೋಪಾಧ್ಯಾಯಿನಿ ಸುರೇಖ ಟೀಚರ್, ಶಾಲಾ ಪ್ರಬಂಧಕಿ ಶಾರದ ವೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ ಬಹುಮಾನ ವಿತರಣಾ ಕಾರ್ಯಕ್ರ‌ಮದಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು. ಬಳಿಕ ವಿಜಯೋತ್ಸವ ಮೆರವಣಿಗೆ ನಡೆಯಿತು.

Post a Comment

0 Comments