Ticker

6/recent/ticker-posts

Ad Code

2027ರಲ್ಲಿ ಎರಡು ಹಂತಗಳಲ್ಲಾಗಿ ಜನ ಗಣತಿಗೆ ನಿರ್ಧಾರ

 

ದೆಹಲಿ : 2011 ರ ನಂತರದ ಮೊದಲ ಜನಗಣತಿಯನ್ನು 2027ರಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಇದನ್ನು ಘೋಷಿಸಿದರು. 2027ರಲ್ಲಿ ದೇಶದ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ತಿಳಿಸಿದರು. ಮೊದಲ ಹಂತವು ಏಪ್ರಿಲ್ ನಿಂದ ಸೆಪ್ಟೆಂಬರ್ 2026 ರವರೆಗೆ ನಡೆಯಲಿದೆ. ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ ಸೇರಿರುತ್ತದೆ. ಎರಡನೇ ಹಂತವು ಫೆಬ್ರವರಿಯಿಂದ ಮಾರ್ಚ್ 2027 ರವರೆಗೆ ನಡೆಯಲಿದೆ. ಈ ಹಂತದಲ್ಲಿ, ಮನೆಗಳ ಪಟ್ಟಿ ಮಾಡಲಾಗುವುದು. ಕೊನೆಯ ಜನಗಣತಿಯನ್ನು ಭಾರತದಲ್ಲಿ 2011 ರಲ್ಲಿ ನಡೆಸಲಾಗಿತ್ತು. ನಂತರ, ಜನಗಣತಿಯನ್ನು 2021 ರಲ್ಲಿ ನಡೆಸಲು ಯೋಜಿಸಲಾಗಿತ್ತು, ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು.

Post a Comment

0 Comments