Ticker

6/recent/ticker-posts

Ad Code

ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಚುನಾವಣಾ ಭದ್ರತಾ ಕೊಠಡಿಗೆ ತಲುಪಿದ ಎಲೆಕ್ಟ್ರಾನಿಕ್ ಮತಯಂತ್ರ, ಮತದಾನ ಸಾಮಗ್ರಿ.

 

ಕಾಸರಗೋಡು :  ಜಿಲ್ಲಾಡಳಿತದ ಕಚೇರಿ ಪರಿಸರದಲ್ಲಿ  ರಾಜ್ಯ ಚುನಾವಣಾ ಆಯೋಗಕ್ಕಾಗಿ ವಿಶೇಷವಾಗಿ ಸಜ್ಜುಗೊಳಿಸಲಾದ ಚುನಾವಣಾ ಭದ್ರತಾ ಕೊಠಡಿಯನ್ನು ಇಂದು ಬೆಳಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿ ಜಿಲ್ಲಾಧಿಕಾರಿ ಕೆ. ಇಂಶೇಖರ್ ನೇತೃತ್ವದಲ್ಲಿ   ತೆರೆಯಲಾಯಿತು. 

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯದ  ಎಲೆಕ್ಟ್ರಾನಿಕ್ ಮತಯಂತ್ರಗಳು ಸೇರಿದಂತೆ ಮತದಾನ ಸಾಮಗ್ರಿಗಳನ್ನು ಸ್ಟ್ರಾಂಗ್ ರೂಮ್‌ಗಳಿಗೆ ಸ್ಥಳಾಂತರಿಸಲಾಯಿತು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಗೋದಾಮನ್ನು ಪರಿಶೀಲನೆಗೆ ಒಳಪಡಿಸಿ ತೆರೆಯಲಾಗಿತ್ತು.  

ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಗೋಪಕುಮಾರ್ ಇವಿಎಂ ನೋಡಲ್ ಅಧಿಕಾರಿ ಉಪ ಕಲೆಕ್ಟರ ಲಿಪು ಎಸ್ ಲಾರೆನ್ಸ್, ಚುನಾವಣಾ ಕಿರಿಯ ಸೂಪರಿಡೆಂಟ್ ರಾಜೀವ್, ಸ್ಥಳೀಯ ಸಂಸ್ಥೆಗಳ ಉಪ ನಿರ್ದೇಶಕ ಕೆ.ವಿ. ಹರಿದಾಸ್, ಚುನಾವಣಾ ನೋಂದಣಿ ಅಧಿಕಾರಿಗಳು ಪಂಚಾಯತ್ ಬ್ಲಾಕ್ ನಗರ ಸಭಾ ಕಾರ್ಯದರ್ಶಿಗಳು ಮತ್ತು ವಿವಿಧ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಕಾವಲು ಅಡಿಯಲ್ಲಿ ಭದ್ರತಾ ಕೊಠಡಿಯ  ಕಾರ್ಯ ಚಟುವಟಿಕೆ ನಡೆಯುತ್ತಿದೆ.


ಚಿತ್ರಗಳು : ಶ್ರೀಕಾಂತ್ ಕಾಸರಗೋಡು

Post a Comment

0 Comments