Ticker

6/recent/ticker-posts

Ad Code

ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಸ್ಪರ್ಧಾ ಕಣಕ್ಕಿಳಿದ 15 ಮಂದಿ ಅಭ್ಯರ್ಥಿಗಳು

 

ಕಾಸರಗೋಡು : ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯವೆದ್ದು, ಯುಡಿಎಫ್ ವಿರುದ್ಧವೇ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆಯಾದ ಈಸ್ಟ್ ಏಳೇರಿ ಗ್ರಾ. ಪಂ. ನ 1ನೇ ವಾರ್ಡಿನಿಂದ ಜೈಸನ್ ಥೋಮಸ್, ಮೂರನೇ ವಾರ್ಡಿನಿಂದ ಜೆಸ್ಸಿ ಟಾಮ್, ಏಳನೇ ವಾರ್ಡಿನ ಜಾನ್ ಪಂಡೋನಂ, ಒಂಭತ್ತನೇ ವಾರ್ಡಿನ ಮ್ಯಾಥ್ಯೂ ಸೆಬಾಸ್ಟಿಯನ್, ಹದಿನಾಲ್ಕನೇ ವಾರ್ಡಿನ ತ್ರೇಸ್ಯಮ್ಮ, ಕಳ್ಳಾರ್ ಗ್ರಾ. ಪಂ. ನ ಹತ್ತನೇ ವಾರ್ಡಿನ ಪಿ. ಎಂ. ಬೇಬಿ, ಕುಂಬಳೆ ಗ್ರಾ. ಪಂ. ನ 18ನೇ ವಾರ್ಡಿನ ಸಮೀರ ರಿಯಾಝ್, ಎಣ್ಮಕಜೆ ಪಂ. ನ 14ನೇ ವಾರ್ಡಿನ ಅಬ್ದುಲ್ ಲತೀಫ್, ಬಳಾಲ್ ಪಂ. ನ 10ನೇ ವಾರ್ಡಿನ ಸನೋಜ್ ಮ್ಯಾಥ್ಯು, ಚೆಂಗಳ ಪಂ. 10ನೇ ವಾರ್ಡಿನ ಸಲೀಂ ಎಡನೀರ್, ಚೆಮ್ನಾಡು ಪಂ. ನ ಒಂಭತ್ತನೇ ವಾರ್ಡಿನ ಮಾಧವಿ ಮುಂಡೋಳ್, ಚೆರುವತ್ತೂರು ಪಂ. ನ 16ನೇ ವಾರ್ಡಿನ ಪಿ. ವಿಜಯನ್, ನೀಲೇಶ್ವರ ನಗರಸಭೆಯ 34ನೇ ವಾರ್ಡಿನ ವಿ. ಉಷಾ, ಕಾಸರಗೋಡು ಬ್ಲಾಕ್ ಪಂ. ನ ಎರಿಯಾಲ್ ಡಿವಿಜನಿನ ಪರ್ವೀನ್ ಟೀಚರ್, ಮಂಜೇಶ್ವರ ಬ್ಲಾಕ್ ಪಂ ನ ಪುತ್ತಿಗೆ ಡಿವಿಜನಿನ ಶುಕೂರ್ ಕಣಾಜೆ ಎಂಬಿವರು  ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

ಪಕ್ಷದ ವಿರುದ್ಧ ಸ್ಪರ್ಧೆಗಿಳಿದ ಈ 15 ಅಭ್ಯರ್ಥಿಗಳನ್ನು ಮತ್ತು ಬಂಡಾಯ ಸ್ಪರ್ಧಿಗಳನ್ನು ಬೆಂಬಲಿಸಿದ ಐವರು ಸೇರಿದಂತೆ ಇಪ್ಪತ್ತು ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದಾಗಿ ಡಿಸಿಸಿ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದಾರೆ. ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸಿ ರಂಗಕ್ಕಿಳಿದ ಕಳ್ಳಾರಿನ ಸಜಿ ಮಣ್ಣುರ್, ಕುಂಬಳೆ ಪಂ.ನ ರಿಯಾಝ್, ಕೇಶವ ದರ್ಬಾರ್ ಕಟ್ಟೆ, ಬಳಾಲ್ ಪಂ. ನ ಎನ್. ಟಿ. ಮ್ಯಾಥ್ಯೂ ಎಂಬಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ. ಕೆ. ಫೈಝಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments