Ticker

6/recent/ticker-posts

Ad Code

ವಿವಾಹ ಟ್ರಿಪ್ ತೆರಳುವ ಬಸ್ಸಿನೊಳಗೆ ನುಸುಳಿದ ಬೃಹತ್ ಗಾತ್ರದ ಹೆಬ್ಬಾವು; ಉರಗ ಪ್ರೇಮಿಯಿಂದ ರಕ್ಷಣೆ

 

ಮಂಗಳೂರು : ವಿವಾಹ ಟ್ರಿಪ್ ತೆರಳುವ ಖಾಸಗಿ ಬಸ್ಸಿನೊಳಗೆ ಹೆಬ್ಬಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ. ಪುತ್ತೂರಿನಲ್ಲಿ ಮದುವೆ ಮುಗಿಸಿ ಹೆಬ್ರಿ ಕಡೆಗೆ  ಹೋಗುವ ಮದುವೆಯ ಖಾಸಗಿ ಬಸ್ಸನ್ನು ಮೂಡಬಿದಿರೆಯ ಹೋಟೆಲ್ ವೊಂದರ ಬಳಿ ಚಹಾ ಕುಡಿಯುವುದಕ್ಕಾಗಿ ನಿಲ್ಲಿಸಿದಾಗ ಬೃಹತ್ ಗಾತ್ರದ ಹಾವು ಬಸ್ಸಿನೊಳಗೆ ಇರುವುದು ಕಂಡು ಬಂದಿದೆ. ಬಸ್ಸಿನ ಡ್ರೈವ‌ರ್ ಇದನ್ನು ಗಮನಿಸಿ  ಸ್ಥಳಿಯರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪರಿಸರವಾಸಿಗಳು  ಉರಗ ಪ್ರೇಮಿ ದಿನೇಶ್ ಎಂಬವರನ್ನು ಕರೆಸಿ  ಬಸ್ಸಿನೊಳಗೆ ಮಲಗಿದ್ದ ಹಾವನ್ನು ಹೊರತೆಗೆದರು. ದಿನೇಶ್ ಪಡುಕೊಣಾಜೆ ಮತ್ತು ತಂಡದವರನ್ನು ಬಸ್ ಸಿಬ್ಬಂದಿಗಳು ಅಭಿನಂದಿಸಿದರು.

Post a Comment

0 Comments