ವರ್ಕಾಡಿ: ಅಯ್ಯಪ್ಪ ಭಕ್ತವೃಂದ ದೇವಂದ ಪಡ್ಪು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದ ಪಡ್ಪು ಇದರ ವಠಾರದಲ್ಲಿ ಅಯ್ಯಪ್ಪ ದೀಪೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಅಯ್ಯಪ್ಪ ಭಕ್ತಾಭಿಮಾನಿಗಳು ನಿರ್ಧರಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಅಯ್ಯಪ್ಪ ಭಕ್ತವೃಂದ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಗೌರವ ಸಲಹೆಗಾರರಾಗಿ ಮೋಹನದಾಸ್ ಭಂಡಾರಿ ನೆತ್ತಿಲ ಬಾಳಿಕೆ, ಸಂಜೀವ ಶೆಟ್ಟಿ ಮಾಡ, ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಧನಂಜಯ ಪೂಜಾರಿ ನೆತ್ತಿಲಪದವು, ಜಗದೀಶ್ ಸುಳ್ಯ, ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕುದುಕೋರಿ, ಪ್ರೇಮಾನಂದ ರೈ ನೆತ್ತಿಲ ಕೋಡಿ, ಕೃಷ್ಣಸ್ವಾಮಿ ಬೊಲ್ಕುಡ್ಡೆ ,ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ನೆತ್ತಿಲ ಕೆಳಗಿನಮನೆ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಆಡ್ಯಂತಾಯ ಕಾಪು, ಶೇಖರ್ ಮಾರ್ಲ ಸಾಂತ್ಯಗಡದ ಗುತ್ತು, ಕಿರಣ್ ಸ್ವಾಮಿ, ಕೋಶಾಧಿಕಾರಿಯಾಗಿ ಪ್ರಮೋದ್ ಕುಮಾರ್ ಗೇರುಕಟ್ಟೆ, ಪ್ರಧಾನ ಸಂಚಾಲಕರಾಗಿ ರವಿಮುಡಿಮಾರು ಆಯ್ಕೆಯಾದರು. ಅಲ್ಲದೆ ಉಪಸಮಿತಿಗಳನ್ನು ರಚಿಸಲಾಯಿತು .

0 Comments