ಕಣ್ಣೂರು: ಪತ್ನಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿ ವಯನಾಡಿನ ಕೆಣಿಚಿರಾ ಮೂಲದ ಜಿಲ್ಸನ್ (55) ಎಂದು ಗುರುತಿಸಲಾಗಿದೆ. ಜೈಲಿನೊಳಗೆ ಆತನ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಹಾಕಿರುವುದು ಪತ್ತೆಯಾಗಿದೆ. ಜಿಲ್ಸನ್ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ರಿಮಾಂಡ್‌ನಲ್ಲಿದ್ದ. ಜೈಲು ಅಧಿಕಾರಿಯೊಬ್ಬರು ಈತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿಸಿದ್ದಾರೆ.

0 Comments