ಕಾಸರಗೋಡು : ಪೊಯಿನಾಚಿಯಿಂದ ಕುಂಡಂಕುಳಿ ರಾಜ್ಯ ಹೆದ್ದಾರಿಯಲ್ಲಿ ಕರಿಚೇರಿ ತಿರುವಿನಲ್ಲಿ ಚಲಿಸುತ್ತಿದ್ದ ವಾಹನವೊಂದರಿಂದ ಡೀಸೆಲ್ ಸೋರಿಕೆಯಾಗಿ ರಸ್ತೆಗೆ ಬಿದ್ದಿದ್ದು ಈ ಸಂದರ್ಭ ರಸ್ತೆಯಲ್ಲಿ ಸಂಚರಿಸಿದ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಬಿದ್ದಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕಾಸರಗೋಡು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅಪಘಾತವನ್ನು ತಪ್ಪಿಸಲು ರಸ್ತೆಯಲ್ಲಿ ಬಿದ್ದಿದ್ದ ಡೀಸೆಲ್ ಮೇಲೆ ಮರಳನ್ನು ಸಿಂಪಡಿಸಿದರು. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ.ಎನ್. ವೇಣುಗೋಪಾಲ್, ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳಾದ ಓ.ಕೆ. ಪ್ರಜಿತ್, ಕೆ.ವಿ. ಜಿತಿನ್ ಕೃಷ್ಣನ್, ಎಂ.ಎ. ವೈಶಾಖ್, ಗೃಹರಕ್ಷಕ ದಳದ ಪಿ. ಶ್ರೀಜಿತ್ ಮತ್ತು ಶೈಲೇಶ್ ಪರಿಹಾರ ಕಾರ್ಯಚರಣೆಗೆ ನೇತೃತ್ವ ನೀಡಿದರು.

0 Comments