ಪತ್ತನಂತಿಟ್ಟ : ಪತ್ನಿ ಮಗನೊಂದಿಗೆ ಶಬರಿಮಲೆ ಯಾತ್ರೆಗೈದ ವ್ಯಕ್ತಿಯೋರ್ವರು ಕಾನನ ಪ್ರಯಾಣ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಮೃತರನ್ನು ಕಾಸರಗೋಡು ನಿವಾಸಿ ಬಟ್ಟತ್ತೂರಿನ ದೇವನ್ ಪೋಡಿಚಪರದ ಎಂ. ಬಾಲಕೃಷ್ಣನ್ (63) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ನೀಲಿಮಲೆ ಹತ್ತುವಾಗ ಅವರು ಅಸ್ವಸ್ಥರಾಗಿದ್ದರು. ಮೂರು ಬಾರಿ ಸಿಪಿಆರ್ ನೀಡಿದ್ದರೂ ಅವರ ಜೀವ ಉಳಿಸಲಾಗಲಿಲ್ಲ. ಬಾಲಕೃಷ್ಣನ್ ಅವರು ಪತ್ನಿ ಕೆ.ವಿ. ಪ್ರತಿಭಾ, ಮತ್ತು ಕಿರಿಯ ಮಗ ಗೋಪಕುಮಾರ್ ಇತರರ ಜತೆ ಶನಿವಾರ ದೇವನ್‌ಪೋಡಿಚಪರ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿ ಯಾತ್ರೆ ಆರಂಭಿಸಿದ್ದರು.

0 Comments