Ticker

6/recent/ticker-posts

Ad Code

ಕರ್ತವ್ಯದ ನಡುವೆ ಪೋಲಿಸರ ಡಿಂಗ್ ಡಾಂಗ್ ಪಾರ್ಟಿ : ಆರು ಮಂದಿಯ ಅಮಾನತು

 

ತಿರುವನಂತಪುರ : ಕರ್ತವ್ಯದ ನಡುವೆ ಮದುವೆಯೊಂದಕ್ಕೆ ಹೋದ ಪೋಲಿಸರು ವಾಹನದಲ್ಲಿ ಕುಳಿತು ಮದ್ಯಪಾನಗೈಯುತ್ತಿದ್ದ ವಿಡಿಯೋ ವೈರಲ್ ಆಗಿದ್ದು ಮದ್ಯಪಾನ ಮಾಡಿದ ಆರೋಪದಲ್ಲಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕಜಕೂಟಂ ಪೊಲೀಸ್ ಠಾಣೆಯ ಪೋಲಿಸರು ಮದ್ಯಪಾನ ಮಾಡಿದ್ದಕ್ಕಾಗಿ  ಆರು ಮಂದಿ  ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಗ್ರೇಡ್ ಎಸ್.ಐ. ಬಿನು, ಸಿ.ಪಿ. ಓಮರ್, ಅರುಣ್, ರತೀಶ್, ಅಖಿಲ್‌ರಾಜ್, ಅರುಣ್ ಎಂ.ಎಸ್, ಮತ್ತು ಮನೋಜ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ ನಾಲ್ವರು ಕುಡಿದಿದ್ದರು. ಆದರೂ ವಾಹನದೊಳಗಿದ್ದ ಆರು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮದುವೆಯ ಆರತಕ್ಷತೆಗೆ ಹೋಗುವ ಮೊದಲು ನಿಲ್ಲಿಸಿದ್ದ ವಾಹನದೊಳಗೆ ಇವರು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳು ಬಿಡುಗಡೆಯಾದ ನಂತರ, ಸಾಮಾಜಿಕ ಮಾಧ್ಯಮ ಸೇರಿದಂತೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.ಇದೀಗ ಕಜಕೂಟಂ ಎ.ಸಿ.ಪಿ. ಚಂದ್ರದಾಸ್ ನಗರ ಪೊಲೀಸ್ ಆಯುಕ್ತರ ಕೋರಿಕೆಯಂತೆ ವರದಿಯನ್ನು ಸಲ್ಲಿಸಿದರು. ವಾಹನ ಚಲಾಯಿಸುತ್ತಿದ್ದ ಗ್ರೇಡ್ ಎಸ್.ಐ. ಬಿನು ಅವರ ಮೇಲೂ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಆರೋಪ ಹೊರಿಸಲಾಗಿದೆ. ಪ್ರಸ್ತುತ ಪೊಲೀಸರನ್ನು ಉತ್ತಮ ನಡವಳಿಕೆ ತರಬೇತಿಗಾಗಿ ಕಳುಹಿಸಲು ನಿರ್ಧರಿಸಲಾಗಿದೆ.

Post a Comment

0 Comments