Ticker

6/recent/ticker-posts

Ad Code

ಕಾಮ ಪಿಪಾಸಿನ ರಾತ್ರಿ ಸುಖಕ್ಕೆ ಅಡ್ಡಿಯಾದ ಮಗುವನ್ನು ಹೊಡೆದು ಕೊಂದ ಪಾಪಿ ತಂದೆ

ತಿರುವನಂತಪುರ : ನೆಯ್ಯಟ್ಟಿಂಕರದಲ್ಲಿ  ನಡೆದಿದ್ದ 1 ವರ್ಷದ ಮಗುವಿನ ಸಾವಿನ ಪ್ರಕರಣದಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಸೆಕ್ಸ್‌ ಗೆ ಅಡ್ಡಿಪಡಿಸಿದ್ದಕ್ಕೆ ತಂದೆಯೇ ಮಗುವನ್ನು ಕೊಲೆಗೈದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 16 ರಂದು  ಕಾವಳಂಕುಲಂನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿ ತಮ್ಮ 1 ವರ್ಷದ ಮಗು ಇಹಾನ್ (ಅಪ್ಪು) ನನ್ನು ಆಸ್ಪತ್ರೆಗೆ ಕರೆತಂದಿದ್ದರು. ಬಿಸ್ಕೆಟ್‌, ದ್ರಾಕ್ಷಿ ತಿಂದ ಬಳಿಕ ಮಗು ಕುಸಿದು ಬಿದ್ದಿದೆ ಎಂದು ಇಬ್ಬರೂ ಹೇಳಿದ್ದರು. ಬಳಿಕ ತುರ್ತು ವಿಭಾಗದಲ್ಲಿ ಇಹಾನ್‌ನನ್ನು ಪರೀಕ್ಷಿಸಿದ ವೈದ್ಯರು ಅವನ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದನ್ನು ಪತ್ತೆಹಚ್ಚಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಯಿತು. ಪೊಲೀಸರು ತನಿಖೆ  ಕೈಗೆತ್ತಿಕೊಂಡರು. ಪ್ರಾಥಮಿಕ ವಿಚಾರಣೆ ಬಳಿಕ ದಂಪತಿಯನ್ನು ಮನೆಗೆ ಕಳಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಫೊರೆನ್ಸಿಕ್ ರಿಪೋರ್ಟ್ ಬಂದ ಬಳಿಕ ಪುನಃ ವಿಚಾರಣೆಗೆ ಕರೆಸಿದರು. ಈ ಸಂದರ್ಭದಲ್ಲಿ ಪತ್ನಿ ನೀಡಿದ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿತು.

ಪತ್ನಿ ವಿಚಾರಣೆಗೆ ಹಾಜರಾದಾಗ, ʻಘಟನೆ ನಡೆದ ದಿನ ರಾತ್ರಿ ಗಂಡ ಹೆಂಡತಿ ಸೆಕ್ಸ್ ವೇಳೆ ಮಗು ಅಳೋಕೆ ಶುರು ಮಾಡಿತು. ಇದರಿಂದ ಸಿಟ್ಟಿಗೆದ್ದ ತಂದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಕೈಯಲ್ಲಿ ಗುದ್ದಿದ್ದಾನೆ. ಈ ಹಿಂದೆಯೂ ಮಗುವನ್ನು ಜೊತೆಯಲ್ಲಿ ಮಲಗಿಸಿದಾಗ ಬೆಡ್ ಶೀಟ್ ನಿಂದ ಮಗುವಿನ ಮುಖ ಮುಚ್ತಿದ್ದ ಅಂತ ಪತ್ನಿ ಕೃಷ್ಣಪ್ರಿಯಾ ಹೇಳಿದ್ದಳು. ಈ ಬೆನ್ನಲ್ಲೇ ಪೋಸ್ಟ್‌ ಮಾರ್ಟಂ ವರದಿಯಲ್ಲೂ ಮಗು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು. ವರದಿ ಆಧರಿಸಿ ತನಿಖೆ ನಡೆಸಿದಾಗ ತಂದೆ ಶಿಜಿಲ್‌ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ. ತೀವ್ರ ಕಾಮ ಪಿಪಾಸುವಾಗಿದ್ದ ಶಿಜಿಲ್‌ ಹಲವು ಸೆಕ್ಸ್‌ ಚಾಟ್‌ ಗ್ರೂಪ್‌ಗಳಲ್ಲಿ  ಆಕ್ಟೀವ್‌ ಆಗಿದ್ದ , ಮಹಿಳೆಯರ ಜೊತೆ ಸೆಕ್ಸ್ ಚಾಟ್ ಗೆಂದೇ ಗ್ರೂಪ್ ಮಾಡಿಕೊಂಡಿದ್ದ ಅನ್ನೋದು ಗೊತ್ತಾಗಿದೆ. ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿದಿದೆ. 

Post a Comment

0 Comments