ಕಾಸರಗೋಡು : ಕೇರಳ ರಾಜ್ಯ ಭಾಷಾ ಮಸೂದೆ ಅಂಗೀಕಾರದ ಬಾಧಕಗಳ ಕುರಿತು ಚರ್ಚಿಸಲು ಕನ್ನಡಪರ ಸಂಘಟನೆಗಳ ಪ್ರಮುಖ ಮುಖಂಡರ ಸಭೆಯು ಕಾಸರಗೋಡು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕರ ಭವನದಲ್ಲಿ ಜರಗಿತು. ಮಸೂದೆಯ ಬಾಧಕಗಳ ಬಗ್ಗೆ ಪ್ರೊ. ರತ್ನಾಕರ ಮಲ್ಲಮೂಲೆ ಮತ್ತು ಅಡ್ವಕೇಟ್ ಎನ್. ಕೆ. ಮೋಹನ್ ದಾಸ್ ವಿವರಿಸಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಮಿತಿ ಅಧ್ಯಕ್ಷರಾದ ಅಡ್ವಕೇಟ್ ಮುರಳೀಧರ ಬಳ್ಳುಕರಾಯ ಅವರು ಮಸೂದೆ ಬಗ್ಗೆ ಬೇಕಾದ ತಿದ್ದುಪಡಿ ಹಾಗೂ ಮುಂದೆ ಮಾಡಬೇಕಾದ ಹೋರಾಟದ ಬಗ್ಗೆ ವಿವರಿಸಿ ಉತ್ತಮ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟತೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮತ್ತು ಅನೇಕ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪರೇಷೆ ಹಾಕಿಕೊಳ್ಳಲಾಯಿತು.

0 Comments