Ticker

6/recent/ticker-posts

Ad Code

ಪೆರ್ಲದ ವ್ಯಾಪಾರಿ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪೈ ನಿಧನ : ವ್ಯಾಪಾರಿಗಳಿಂದ ಸಂತಾಪ

 

ಪೆರ್ಲ: ವ್ಯಾಪಾರಿ ಸಮಿತಿ ಪೆರ್ಲ ಘಟಕದ ಮಾಜಿ ಅಧ್ಯಕ್ಷ, ಕೃಷಿಕ ಕೃಷ್ಣ ಪೈ ಬಜಕೂಡ್ಲು(69) ಸೋಮವಾರ ನಿಧನರಾಗಿದ್ದಾರೆ. ಪೆರ್ಲದಲ್ಲಿ ಎರಡು ದಶಕಗಳ ಕಾಲ  ಹಾರ್ಡ್‌ವೇರ್ ಅಂಗಡಿಯೊಂದನ್ನು ನಡೆಸಿಕೊಂಡು ಜನಾನುರಾಗಿಯಾಗಿದ್ದ ಇವರು ವ್ಯಾಪಾರಿ ಸಂಘಟನೆಯಲ್ಲೂ, ವ್ಯಾಪಾರ ಭವನ ನಿರ್ಮಾಣದಲ್ಲೂ ಗಣನೀಯ ಪಾತ್ರವಹಿಸಿದ್ದಾರೆ. ಇವರ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿದ ವ್ಯಾಪಾರಿ ಸಮಿತಿಯು ಇಂದು ಬೆಳಗ್ಗೆ ಹತ್ತು ಗಂಟೆಯವರೆಗೆ ಅಂಗಡಿಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಭೆ ನಡೆಸಿತು.

Post a Comment

0 Comments