ಬದಿಯಡ್ಕ: ಕಣ್ಣೂರು ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೖಲಿನಿಂದ ಹೊರಕ್ಕೆಸೆಯಲ್ಪಟ್ಟು ಬದಿಯಡ್ಕ ಸಮೀಪದ ನಾರಂಪಾಡಿಯ ಯುವಕನೋರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ. ನಾರಂಪಾಡಿ ನಿವಾಸಿ ಅಬ್ದುರಹಿಮಾನ್ – ಆಯೇಷಾ ದಂಪತಿಯ ಪುತ್ರ ಇಬ್ರಾಹಿಂ ಅಲ್ತಫಾ(18) ಮೃತ ವ್ಯಕ್ತಿಯಾಗಿದ್ದಾನೆ. ಸೋಮವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕೋಝಿಕ್ಕೋಡ್ ನಿಂದ ಗೆಳೆಯರ ಜತೆ ಕಾಸರಗೋಡಿಗೆ ಆಗಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ರೈಲಿನಿಂದ ಎಸೆಯಲ್ಪಟ್ಟ ಕೂಡಲೇ ರೈಲ್ವೇ ಪೊಲೀಸರು ಈತನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಿಲ್ಲ.

0 Comments