Ticker

6/recent/ticker-posts

Ad Code

ಮೂಲ ವೇತನವನ್ನು 40 ಸಾವಿರವರೂ.ಗೆ ಏರಿಸಬೇಕು ಎಂದು ಆಗ್ರಹಿಸಿ ಖಾಸಗಿ ಆಸ್ಪತ್ರೆ ನರ್ಸ್ ಗಳಿಂದ ಫೆ.21ಕ್ಕೆ ಮುಷ್ಕರ

ತ್ರಿಶೂರ್: ಮೂಲ ವೇತನವನ್ನು 40,000 ರೂ.ಗೆ ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಖಾಸಗಿ ಆಸ್ಪತ್ರೆಗಳ ನರ್ಸ್‌ಗಳು ಮುಷ್ಕರ ನಡೆಸಲಿದ್ದಾರೆ. ಫೆಬ್ರವರಿ 21 ರಂದು 476 ಖಾಸಗಿ ಆಸ್ಪತ್ರೆಗಳ ನರ್ಸ್‌ಗಳು ಮುಷ್ಕರ ಹೂಡಲಿದ್ದಾರೆ. ತ್ರಿಶೂರ್‌ನಲ್ಲಿ ನಡೆದ ಸಭೆಯ ನಂತರ ಯುನೈಟೆಡ್ ನರ್ಸ್ ಅಸೋಸಿಯೇಶನ್ (ಯುಎನ್‌ಎ) ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆ.21ರಂದು ತ್ರಿಶೂರ್‌ನಲ್ಲಿ ನರ್ಸ್‌ಗಳು ಸೇರಿ ಮುಷ್ಕರ ಘೋಷಣೆ ಸಮಾವೇಶ ನಡೆಸಲಿದ್ದಾರೆ. ಅಂದು ಮೂರನೇ ಒಂದು ಭಾಗದಷ್ಟು ನರ್ಸ್‌ಗಳು ಮಾತ್ರ ರಾಜ್ಯದ ಖಾಸಗಿ ಆಸ್ಪತ್ರೆಯ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕಳೆದ ಏಳು ವರ್ಷಗಳಿಂದ ಆರೋಗ್ಯ ರಂಗದಲ್ಲಿ ಯಾವುದೇ ವೇತನ ಸುಧಾರಣೆಯಾಗಿಲ್ಲ ಎಂದು ಯುಎನ್‌ಎ ತಿಳಿಸಿದೆ. 2016ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಜಗದೀಶ್ ಪ್ರಸಾದ್ ಸಮಿತಿ ವರದಿ ಸಲ್ಲಿಸಿತ್ತು. ಖಾಸಗಿ ವಲಯದ ನರ್ಸ್‌ಗಳು ಸರ್ಕಾರಿ ನರ್ಸ್‌ಗಳಿಗೆ ಸಮಾನವಾದ ವೇತನವನ್ನು ಪಡೆಯಬೇಕು ಎಂದು ವರದಿ ಹೇಳುತ್ತದೆ. ವರದಿಯ ಶಿಫಾರಸುಗಳು ರಾಜ್ಯದಲ್ಲಿ ಇನ್ನೂ ಜಾರಿಯಾಗಿಲ್ಲ. ಯುಎನ್‌ಎ ಐದು ವರ್ಷಗಳಿಂದ ಮೂಲ ವೇತನವಾಗಿ 40,000 ರೂ.ಗೆ ಏರಿಸಬೇಕು ಎಂದು ಬೇಡಿಕೆ ಇರಿಸಿದೆ.

Post a Comment

0 Comments