Ticker

6/recent/ticker-posts

Ad Code

ಸೀತಾಂಗೋಳಿಯಲ್ಲಿ ಎಂಡಿಎಂಎ ಸಹಿತ ಯುವಕನ ಬಂಧನ


 ಕುಂಬಳೆ: ಸೀತಾಂಗೋಳಿ ರಾಜೀವ್ ಕಾಲೋನಿಯ ಇಚ್ಚಾಡು ಅಲಿಯಾಸ್ ಅಬ್ದುಲ್ ನಿಸಾರ್ (24) ಎಂಬಾತನನ್ನು 2.22 ಗ್ರಾಂ ಎಂಡಿಎಂಎ ಸಹಿತ ಕುಂಬಳೆ ಎಸ್ ಐ ಅನಂತಕೃಷ್ಣನ್ ಬಂಧಿಸಿದ್ದಾರೆ. ಆರೋಪಿಯ ಪ್ಯಾಂಟ್ ಜೇಬಿನಲ್ಲಿ ಪಾಲಿಥಿನ್ ಕವರ್ ನಲ್ಲಿ ಎಂಡಿಎಂಎ ಲಭಿಸಿದೆ. ಇದರೊಂದಿಗೆ ಆರೋಪಿಯಿಂದ ಒಂದು ಪೈಪ್, 500 ರೂಪಾಯಿ ಮತ್ತು ಎರಡು ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮುಗು ಹಾಲ್ ಬಳಿ ಪೊಲೀಸರು ಬರುತ್ತಿರುವುದನ್ನು ಕಂಡು ಮುಂದಿನ ಅಂಗಡಿಗೆ ಓಡಲು ಯತ್ನಿಸುತ್ತಿದ್ದಾಗ  ಇಚ್ಚಾಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ನಂತರ ತಪಾಸಣೆ ನಡೆಸಿದಾಗ  ಡ್ರಗ್ಸ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮಾದಕ ವಸ್ತು ಹಾಗೂ ಬೈಕ್ ಅನ್ನು ವಶ ಪಡೆಸಿಕೊಂಡಿದ್ದಾರೆ.

Post a Comment

0 Comments