Ticker

6/recent/ticker-posts

Ad Code

ಮಾದಕ ವಸ್ತು ಸಾಗಾಟ : ನಟಿ ಅಂಜು ಕೃಷ್ಣ ಸಹಿತ ಎಂಟು ಮಂದಿ ಬಂಧನ

ಚೆನ್ನೈ : ಮಾದಕ ವಸ್ತು ಸಾಗಾಟದ ಆರೋಪದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಅಂಜು ಕೃಷ್ಣ, ತಮಿಳು ಸಿನಿಮಾ ಸಹ ನಿರ್ದೇಶಕಿ ವಿನ್ಸಿ ನಿವೇದಾ ಸೇರಿದಂತೆ ಎಂಟು ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮೆಥಾಂಫೆಟಮೈನ್, ಎಲ್‌ಎಸ್‌ಡಿ ಸ್ಟಾಂಪ್‌ಗಳು ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಂಜು ಕೃಷ್ಣ (30), ವಿನ್ಸಿ ನಿವೇದಾ (26), ಕಾರ್ತಿಕ್ ರಾಜಾ (31), ಯಶವಂತ್ (25), ಶ್ರೀರಾಮ್ (33), ಅಲ್ವಿಬಿನ್ಶಾ (27) ಮತ್ತು ವೆಂಕಟೇಶ್ ಕುಮಾರ್ (31) ಬಂಧಿತರಾಗಿದ್ದಾರೆ. ಆರೋಪಿಗಳಿಂದ 6 ಗ್ರಾಂ ಮೆಥಾಂಫೆಟಮೈನ್, 7 ಗ್ರಾಂ ಒಜಿ ಗಾಂಜಾ, 15 ಗ್ರಾಂ ಗಾಂಜಾ, ಒಂದು ಎಲ್‌ಎಸ್‌ಡಿ ಸ್ಟ್ಯಾಂಪ್ ಮತ್ತು 9 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ವಿಧಿಸಲಾಗಿದೆ.

Post a Comment

0 Comments