ಕಾಸರಗೋಡು : ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕುಂಡಕುಯಿ ಶಾಖೆಯ ಸಕ್ರಿಯ ಸದಸ್ಯರಾದ ಕುಂಡಂಕುಳಿಯ ರಾಧಾಕೃಷ್ಣ ಭಟ್ ಅವರ ವೈದ್ಯಕೀಯ ಚಿಕಿತ್ಸೆಗಾಗಿ 33,136 ಮೊತ್ತದ ಚೆಕ್ಕನ್ನು ಕ್ಯಾಂಪ್ಕೋ ನಿರ್ದೇಶಕ ಗಣೇಶ್ ಪಾರಕಟ್ಟೆ ಹಾಗೂ ವಿವೇಕಾನಂದ ಗೌಡ ಪಾಲಾರ್ ಅವರು ಕುಂಡಂಕುಳಿಯಲ್ಲಿರುವ ರಾಧಾಕೃಷ್ಣ ಭಟ್ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಎಂ. ಚಂದ್ರ ಮತ್ತು ಕಾಸರಗೋಡು ಶಾಖಾ ವ್ಯವಸ್ಥಾಪಕ ಎ. ವಿನೋದಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..

0 Comments