Ticker

6/recent/ticker-posts

Ad Code

ಕಾರು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ನಟ ಮಣಿಯನ್ ಪಿಳ್ಳ ರಾಜು ಸ್ಟೇಶನ್ ಗೆ ಹಾಜರು

ತಿರುವನಂತಪುರ: ಚಲನಚಿತ್ರ ನಟ ಮಣಿಯನ್ ಪಿಳ್ಳ ರಾಜು ಸಂಚರಿಸುತ್ತಿದ್ದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಈ ಪ್ರಕರಣದಲ್ಲಿ ನಟ ಮಣಿಯನ್ ಪಿಳ್ಳ ರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ  ಟ್ರಿವೆಂಡ್ರಮ್ ಕ್ಲಬ್ ಎದುರು ಅಪಘಾತ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಹೋಗಿತ್ತು. ಅಪಘಾತದಲ್ಲಿ ನಿವೇದಿತ್ ಕೃಷ್ಣ ಮತ್ತು ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.  ನಿವೇದಿತ್ ಅವರ ಕಾಲುಗಳು ಮತ್ತು ಸೂರಜ್ ಅವರ ಬೆನ್ನುಮೂಳೆಯು ಮುರಿತವಾಗಿದೆ. ತಿರುವನಂತಪುರದ ಖಾಸಗಿ ಆಸ್ಪತ್ರೆಗಳಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಪಘಾತದ ಬಗ್ಗೆ ದೂರು ನೀಡಿದ್ದು, ಕಾರು ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಬೈಕ್ ಎಳೆದುಕೊಂಡು ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು  ತಿಳಿಸಿದ್ದಾರೆ. ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸಲು ವಿಫಲ, ಜೀವಹಾನಿ ಆಗುವ ರೀತಿಯಲ್ಲಿ ವಾಹನ ಚಾಲನೆ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಿಗೆ ಮಾಹಿತಿ ನೀಡದ ಆರೋಪಗಳಲ್ಲಿ  ಮಣಿಯನ್ ಪಿಳ್ಳ ರಾಜು ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

 

Post a Comment

0 Comments