ಉಪ್ಪಳ : ಬಾಯಾರು ಸಮೀಪದ ಬೆರಿಪದವು ಶ್ರೀ ಮೂಕಾಂಬಿಕಾ ಭಜನ ಮಂದಿರದ 19ನೇ ವರ್ಷದ ಕಾರ್ಯಕ್ರಮಗಳು ಈ ಬಾರಿ ಫೆಬ್ರವರಿ 6,7,8ರಂದು ಭಜನಾ ಮಂದಿರದ ನೂತನ ಮೇಲ್ಟಾವಣಿಯ ಲೋಕಾರ್ಪಣೆ, ಭಜನಾ ಸಂಗಮ, ಚಂಡಿಕಾ ಯಾಗ ಕಾರ್ಯಕ್ರಮಗಳು ಪ್ರಮುಖವಾಗಿ ಆಯೋಜಿಸಲಾಗಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ವಿಧುಶೇಖರ ಭಾರತೀ ಸ್ವಾಮೀಜಿಗಳು, ಶೃಂಗೇರಿ ಮಠ ಇವರ ಶುಭಾಶೀರ್ವಾದದೊಂದಿಗೆ ಶ್ರೀದೇವಿ ಸೇವಾ ಸಮಿತಿ (ರಿ.) ಬೆರಿಪದವು ಇದರ ನೇತೃತ್ವದಲ್ಲಿ ಫೆಭ್ರವರಿ 7 ಶನಿವಾರ ಬೆರಿಪದವು ಶ್ರೀ ಮೂಕಾಂಬಿಕಾ ಭಜನ ಮಂದಿರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಪರಕ್ಕಜೆ ಗಣಪತಿ ಭಟ್ಟರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ಚಂಡಿಕಾಯಾಗ ವನ್ನು ಮತ್ತು ಫೆಬ್ರವರಿ 8ನೇ ಆದಿತ್ಯವಾರ ಭಜನಾ ಸಂಗಮ ಹಾಗೂ ಭಜನಾ ಮಂದಿರಕ್ಕೆ ನೂತನವಾಗಿ ನಿರ್ಮಿಸಿದ ಮೇಲ್ಚಾವಣಿಯ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ.ಆ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪೆಬ್ರವರಿ 6ರಂದು ಶುಕ್ರವಾರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಟಿ. ಶ್ಯಾಮ ಭಟ್ ಗೌರವ ಉಪಸ್ಥಿತಿಯಲ್ಲಿ ಸಂಜೆ ಗಂಟೆ 6.30ಕ್ಕೆ ಸರಿಯಾಗಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ"ಚಂದ್ರಾವಳಿ ವಿಳಾಸ, ಅಗ್ರಪೂಜೆ, ಸೈಂದವ ಕಾಳಗ"ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 07-02-2026 ಶನಿವಾರ ಬೆಳಿಗ್ಗೆ 8.00 ಗಂಟೆಗೆ : ಚಂಡಿಕಾಯಾಗ ಪ್ರಾರಂಭ, 11.00 ಗಂಟೆಗೆ : ಪೂರ್ಣಾಹುತಿ ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಜರಗುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಬೆಂಗಳೂರು MRG Group ಜೆಯರ್‌ಮೆನ್ ಕೆ. ಪ್ರಕಾಶ್ ಶೆಟ್ಟಿ, ಅಸ್ತ್ರ ಗ್ರೂಪ್ ಆಫ್ ಕಂಪನೀಸ್ ಉದ್ಯಮಿ ಲಂಚುಲಾಲ್ ಮಂಗಳೂರು, ಕ್ರೀಡಾ ಭಾರತಿ ರಾಜ್ಯ ಕಾರ್ಯಕಾರಿಣಿ ಸಮಿತಿಸದಸ್ಯಶ್ರೀ ಕೃಷ್ಣ ತಾರೆಮಾರ್ಸದಾನಂದ ಆಳ್ವಪೆರ್ವೋಡಿಬೀಡು ಚಂದ್ರಹಾಸ ಶೆಟ್ಟಿ, ಕೂಳೂರು ಕನ್ಯಾನ, ರತ್ನಾಕರ ಶೆಟ್ಟಿ ಕಂಬಳಕೋಡಿ, ಸದಾನಂದ ಬಂಡಾರಿ, ರಾಮಕೃಷ್ಣ ಭಟ್, ಉದ್ಯಮಿಗಳು ಬೆಂಗಳೂರು ಶ್ರೀ ಶ್ಯಾಮಸೂರ್ಯ ಬಾಯಾರು ಮುಳಿಗದ್ದೆ, ಜಯರಾಜ್ ಶೆಟ್ಟಿ ಚಾರ್ಲ, ಉರ್ಮಿಳಾ ಪ್ರಕಾಶ್ ಭಂಡಾರಿ ಪೆರ್ವೋಡಿಬೀಡು ಮೊದಲಾದವರು ಭಾಗವಹಿಸುವರು.ಅಂದು ಸಂಜೆ 6 ಗಂಟೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಛಾಯಾ ನಂದನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಪೆಬ್ರವರಿ 8 ಆದಿತ್ಯವಾರ: ಸಂಜೆ 3 ಗಂಟೆಗೆ : ಭಜನಾ ಸಂಗಮ ಆರಂಭಗೊಳ್ಳಲಿದೆ. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಭಜನ ಮಂದಿರಕ್ಕೆ ನೂತನವಾಗಿ ನಿರ್ಮಿಸಿದ ಮೇಲ್ಲಾವಣಿಯ ಲೋಕಾರ್ಪಣೆಜರಗಲಿದೆ.ಹೇರಂಭ ಇಂಡಸ್ಟ್ರೀಸ್ ಮುಂಬಯಿ ಇದರ ಉದ್ಯಮಿ ,ಕೊಡುಗೈದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಘಾಟಿಸುವರು.ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನಗೈಯುವರು. ಶಶಿಧರ ಶೆಟ್ಟಿ ಬರೋಡ, ಉದ್ಯಮಿ ಶ್ಯಾಮಸೂರ್ಯ ಮುಳಿಗದ್ದೆ, ಕೆ.ಕೆ. ಶೆಟ್ಟಿ, ಮುಂಬಯಿ, ಗಣೇಶ ರೈ ಬೆಂಗಳೂರು, ಶಂಕರ ಶೆಟ್ಟಿ ಗುಜರಾತ್,ರಮೇಶ್ ವರಪ್ಪಾದೆ,ನಾರಾಯಣ ನ್ಯಾಕ್ ನಡುಹಿತ್ಲು, ಭಾಗವಹಿಸುವರು.ರಾತ್ರಿ ಗಂಟೆ 8.00ರಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ.ರಾತ್ರಿ ಗಂಟೆ 9ರಿಂದ : ಲಲಿತಾ ಯಕ್ಷಗಾನ ತಂಡ ಏಳ್ಳಾನ ಇದರ ಮಕ್ಕಳಿಂದ ಸುದರ್ಶನ ವಿಜಯಯಕ್ಷಗಾನ ಬಯಲಾಟ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಈ ಬೃಹತ್ ಕಾರ್ಯಕ್ರಮ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು ಭಕ್ತ ಬಾಂಧವರನ್ನು ಆಹ್ವಾನಿಸಲಾಗಿದೆ.

0 Comments