ಬಿಎಂಟಿಸಿ ಬಸ್ ಹರಿದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ (ಫೆ.6) ಬೆಳ್ಳಿಗ್ಗೆ 10ಗಂಟೆ ಸುಮಾರಿಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗೆ 20 ವರ್ಷದ ಯುವತಿಯೊಬ್ಬರು ಬಲಿಯಾಗಿದ್ದಾರೆ. ಮಣಿಪುರದಿಂದ ಬಂದು ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನ್ನಾ ಇನಕಾ ಸಾವನ್ನಪ್ಪಿದ ಯುವತಿ ಎಂದು ಗುರುತಿಸಲಾಗಿದೆ. ಹನ್ನಾ ಇನಕಾ ಕುಳಿತಿದ್ದ ಬೈಕ್ ಇವಿ ಬಸ್ ಮುಂದೆ ಬಂದಾಗ ಮುಂಭಾಗಕ್ಕೆ ಟಚ್ ಆಗಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಹಿಂಭಾಗದಲ್ಲಿ ಕುಳಿತ ಯುವತಿ ಬಸ್ ಮುಂಭಾಗದ ಚಕ್ರಕ್ಕೆ ಬಿದ್ದಿದ್ದು, ಬಸ್ ಆಕೆಯ ತಲೆ ಮೇಲೆ ಹರಿದಿದೆ. ಅಪಘಾತವಾದ ಕೂಡಲೇ ಬಸ್ ಕೆಳಗಡೆ ಬಿದ್ದ ಯುವತಿಯನ್ನು ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಯುವತಿ ಮೂಲತಃ ಮಣಿಪುರ ಮೂಲದವರಾಗಿದ್ದು, ಕೆಲಸ ಅರಸಿ, ಬೆಂಗಳೂರಿಗೆ ಬಂದು ಮಾರತಳ್ಳಿಯಲ್ಲಿ ವಾಸವಾಗಿದ್ದರು.

0 Comments