Ticker

6/recent/ticker-posts

Ad Code

ಜಿ ಎಚ್ ಎಸ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿದ ಸಿಎಚ್ ಗ್ರಂಥಾಲಯ ಸಿಬ್ಬಂದಿ

 

ಕಾಸರಗೋಡು ಜಿ ಎಚ್ ಎಸ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಿಎಚ್ ಗ್ರಂಥಾಲಯ ಸಿಬ್ಬಂದಿ ಉಡುಗೊರೆಗಳನ್ನು ನೀಡಿದರು.  ಮೊಗ್ರಾಲ್ ಪುತ್ತೂರು ಶಾಲೆಯಲ್ಲಿ ಶುಕ್ರವಾರದಿಂದ ಮೆಗಾ ಪ್ರವೇಶ ಪ್ರಾರಂಭವಾಗಿದ್ದು   ಮೊದಲ ಹಂತದಲ್ಲಿ,  ಪ್ರವೇಶ ಪಡೆಯುವ  ಐವತ್ತು ವಿದ್ಯಾರ್ಥಿಗಳಿಗೆ ಕುನ್ನಿಲ್ ಸಿಎಚ್ ಮುಹಮ್ಮದ್ ಕೋಯ ಸ್ಮಾರಕ ಗ್ರಂಥಾಲಯದಿಂದ  ಉಡುಗೊರೆಗಳನ್ನು ನೀಡಲಾಯಿತುಕಾರ್ಯಕ್ರಮದಲ್ಲಿ ಗ್ರಂಥಾಲಯ ಅಧ್ಯಕ್ಷ ಮಾಹಿನ್ ಕುನ್ನಿಲ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಶಿದಾ ಮಹಮ್ಮದ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಬೀನಾ, ಪಿ ಟಿ ಅಧ್ಯಕ್ಷ ನೆಹರು ಕಡವತ್, ಶಿಕ್ಷಕರಾದ ನಿಸಾರ್, ಸೈದಲವಿ, ಮಾಜಿದಾ  ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments