Ticker

6/recent/ticker-posts

Ad Code

ಬದಿಯಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ವಿಚಾರ ಸಂಕಿರಣ

  

ಬದಿಯಡ್ಕ :  ಬದಿಯಡ್ಕ ಗ್ರಾಮ ಪಂಚಾಯತ್  ಅಭಿವೃದ್ಧಿ ವಿಚಾರ ಸಂಕಿರಣ ನಡೆಯಿತು. 2026-27ನೇ ಸಾಲಿನ ಆರ್ಥಿಕ ಯೋಜನೆ ರೂಪಿಸುವ ನಿಟ್ಟಿನಲ್ಲಿ  ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ನಡೆದ ಅಭಿವೃದ್ಧಿ ವಿಚಾರ ಸಂಕಿರಣವನ್ನು ಶಾಸಕ ಎನ್.ಎ.ನೆಲ್ಲಿಕುನ್ನು  ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಡಿ.ಶಂಕರ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಸಮಿತಿ ಉಪಾಧ್ಯಕ್ಷ ಅನ್ವರ್ ಓಝೋನ್ ವಿಷಯ ಮಂಡಿಸಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡಂಜಿ ವಾರ್ಷಿಕ ಯೋಜನೆ ಮಂಡಿಸಿದರು. ಪಂಚಾಯತ್ ಉಪಾಧ್ಯಕ್ಷೆ ಕೆ.ಎಂ.ಅಶ್ವಿನಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ, ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ಮಾಹಿನ್ ಕೇಳೋಟ್, ಪಂಚಾಯತ್ ಸದಸ್ಯರಾದ ಶ್ಯಾಮ್ ಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ, ಬಾಲಕೃಷ್ಣ ಶೆಟ್ಟಿ, ಶ್ಯಾಮ್ ಪ್ರಸಾದ್ ಸರಳಿ, ಅನ್ನತ್ ಬೀವಿ, ಅಶ್ವತಿ ಅಶೋಕನ್, ಮಂಜುನಾಥ, ಫಾತಿಮತ್ ಫೌಜಿಯಾ, ಶಾಹಿನಾ, ಸುಬೈದಾ, ಪ್ರಜ್ಞಾ, ಲೀಲಾವತಿ, ಬಿಂದ್ಯ, ಉಷಾ, ಪಂಚಾಯತ್ ಕಾರ್ಯದರ್ಶಿ ಎ.ಕೆ.ಸರಿನ್, ಸಹಾಯಕ ಕಾರ್ಯದರ್ಶಿ ಪಿ.ಕೆ.ಸಾಜಿ ಮಾತನಾಡಿದರು.

Post a Comment

0 Comments