Ticker

6/recent/ticker-posts

Ad Code

ಬದಿಯಡ್ಕ ಸಿಡಿಎಸ್ ಚುನಾವಣೆ ; ಸೋತಾಗ ವ್ಯವಸ್ಥೆಯನ್ನೇ ಜರಿಯುವ ಕಾಂಗ್ರೆಸ್ ಜಾಯಮಾನ ಹಾಸ್ಯಾಸ್ಪದ: ಬಿಜೆಪಿ ಪ್ರತಿಕ್ರಿಯೆ

 

ಕುಟುಂಬಶ್ರೀ ಸಿಡಿಎಸ್ ಚುನಾವಣೆಯನ್ನು ಬಿಜೆಪಿ ರಾಜಕೀಯಗೊಳಿಸಿದೆ ಎಂಬ ಯುಡಿಎಫ್ ಆರೋಪ ಸತ್ಯಕ್ಕೆ ದೂರವಾದುದೆಂದು ಬಿಜೆಪಿ ತಿಳಿಸಿದೆ. ಕಳೆದ 25 ವರ್ಷಗಳ ದುರಾಡಳಿತದಿಂದ ಬೇಸತ್ತ ಜನರು ಹೊಸ ಆಡಳಿತ ಬಯಸಿದಾಗ ಅದನ್ನು ಸಹಿಸಲಾಗದ ಹತಾಶ ಮನೋಭಾವವಿದು. ಸಿಡಿಎಸ್ ಸದಸ್ಯರನ್ನು ಬೆದರಿಸಿ ಮತ ಹಾಕಿಸಬೇಕಾದ ಅಗತ್ಯ ಇಲ್ಲ. ಸಿಡಿಎಸ್ ಯಾರು ಆಡಳಿತ ನಡೆಸಬೇಕು ಎಂದು ಎಲ್ಲ ಸದಸ್ಯರಿಗೂ ಚೆನ್ನಾಗಿ ಗೊತ್ತು.ಅದರಿಂದಾಗಿಯೇ ಅವರು 25 ವರ್ಷ ಆಡಳಿತ ನಡೆಸಿದವರನ್ನು ಕೈಬಿಟ್ಟು ಯೋಗ್ಯರನ್ನು ಆರಿಸಿದ್ದಾರೆ.

ಬಿಜೆಪಿಯು ಸಿಡಿಎಸ್ ಚುನಾವಣೆಯನ್ನಾಗಲೀ ಗ್ರಾಮ ಪಂಚಾಯತು ಆಡಳಿತವನ್ನಾಗಲೀ ರಾಜಕೀಯಗೊಳಿಸಿಲ್ಲ. ಆದರೆ  ಈ ಹಿಂದೆ ಯುಡಿಎಪ್ ಆಡಳಿತದ ವೇಳೆ ಸಿಡಿಎಸ್ ನ‌ ಒಂದು ಗುಂಪನ್ನು ಮುಸ್ಲಿಂ ಲೀಗ್ ಕಚೇರಿಗೆ ಕೊಂಡೊಯ್ದು ಸಭೆ ನಡೆಸಿದ್ದು ಯಾರೂ ಮರೆತಿಲ್ಲ. ಗ್ರಾಮ‌ಪಂಚಾಯತು ಅಧ್ಯಕ್ಷರ ಕಚೇರಿಯಲ್ಲಿಯೇ ಯುಡಿಎಫ್ ಸಭೆ ನಡೆಸಿದ್ದು ಸಹ ಜನರು ಮರೆತಿಲ್ಲ. ಈ ಹಿಂದಿನ ಸಿಡಿಎಸ್ ಚುನಾವಣೆಗಳು ಸಂಸ್ಕೃತಿ ಭವನದಲ್ಲಿ ನಡೆದಾಗ ಅದರಲ್ಲಿ UDF ಗೆದ್ದಾಗ ಯಾರಿಗೂ ದೂರು ಇರಲಿಲ್ಲ. ಜನರು UDF ನ್ನು ಕೈ ಬಿಟ್ಟಾಗ ವ್ಯವಸ್ಥೆಯನ್ನೇ ದೂರುವುದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಜಂಡದ ಭಾಗ ಅಷ್ಟೆ. ಇಂತವರಿಂದ ಸಭ್ಯತೆಯ ನೀತಿ ಅಗತ್ಯವಿಲ್ಲ ಎಂದು ಬಿಜೆಪಿ ಹೇಳಿದೆ.

Post a Comment

0 Comments