ಬದಿಯಡ್ಕ : ಬೇಳದ ಸಾರ್ವಜನಿಕ ಸ್ಥಳವೊಂದರಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಗೌಪ್ಯ ಮಾಹಿತಿಯಂತೆ ಬದಿಯಡ್ಕ ಪೊಲೀಸರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ. ಬೇಳ ವಿ.ಎಂ. ನಗರದ ಅನಿಲ್ ಕುಮಾರ್ (28), ಬೇಳ ಡಿ. ಉದಯ ಕುಮಾರ್ (40), ಪುತ್ತಿಗೆ ಕಿನ್ನಿಮಜಲುವಿನ ನಾರಾಯಣ (42), ಕುಮಾರ ಮಂಗಲಂನ ರವಿರಾಜ್ (37), ಬೇಳ ವಿ.ಎಂ. ನಗರ ಷಣ್ಮುಗ ನಿಲಯಂನ ನಿಧೀಶ ಕುಮಾರ್ (28), ಬೇಳ ಕಣ್ಣಿನ ಆಸ್ಪತ್ರೆ ಬಳಿಯ ನಾರಾಯಣ ರೈ (48) ಮತ್ತು ಬೇಳ ಚೌಕರ್‌ನ ಅಕ್ಷಯ (34) ಅವರನ್ನು ಬಂಧಿಸಲಾಗಿದೆ. ಇದಲ್ಲದೆ ಕಂಡರೆ ಗುರುತು ಪತ್ತೆ ಹಚ್ಚಬಹುದಾದ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳದಿಂದ 3400 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಮಧ್ಯಾಹ್ನ 2:30 ಕ್ಕೆ ಬೇಳ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬದಿಯಡ್ಕ ಎಸ್‌ಐ ಸವ್ಯಸಾಚ್ ಅವರು ನಡೆಸಿದ ದಾಳಿಯಲ್ಲಿ ಕೋಳಿ ಅಂಕದಲ್ಲಿ ಭಾಗಿಯಾಗಿದ್ದ ಜನರನ್ನು ಬಂಧಿಸಲಾಗಿದೆ. ಪೊಲೀಸರ ಕಾರ್ಯಚರಣೆ ವೇಳೆ ಕೆಲವರು ಓಡಿಹೋಗಿದ್ದು, ಗುರುತು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments