Ticker

6/recent/ticker-posts

Ad Code

ಕರ್ನಾಟಕ ವಿದೇಶಿ ಮದ್ಯದೊಂದಿಗೆ ಯುವಕನ ಬಂಧನ

ಕುಂಬಳೆ: ಕರ್ನಾಟಕ ಮದ್ಯದೊಂದಿಗೆ ಯುವಕನೋರ್ವನನ್ನು ಕುಂಬಳೆ ಅಬಕಾರಿ ದಳವು ಬಂಧಿಸಿದೆ.  ನಾಯ್ಕಾಪು ಸಮೀಪದ ನಾರಾಯಣ ಮಂಗಲಂ ಅಕ್ಷಿತ್ ಕೆ (32) ಎಂಬಾತ ಬಂಧಿತ. ನಿನ್ನೆ (ಸೋಮವಾರ) ಮಧ್ಯಾಹ್ನ 12.50 ರ ಸುಮಾರಿಗೆ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಹೋಟೆಲ್ ರಾಜಕಮಲ್ ಮುಂದೆ ಮದ್ಯದೊಂದಿಗೆ ನಿಂತಿದ್ದ ಈತನನ್ನು ಬಂಧಿಸಲಾಗಿದೆ. ಈತನ ಬಳಿಯಿದ್ದ 5.4 ಲೀಟರ್ ಕರ್ನಾಟಕ ವಿದೇಶಿ ಮದ್ಯವನ್ನು ಅಬಕಾರಿ ತಂಡವು ವಶಪಡಿಸಿಕೊಂಡಿದೆ. ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟಿವ್ ಆಫೀಸರ್ ಜಿಜಿನ್ ಎಂ.ವಿ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿತು. ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯ ಸೆಕ್ಷನ್ 58 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ಕಾಸರಗೋಡು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ರಿಮಾಂಡ್ ನಲ್ಲಿರಿಸಿದೆ. ಕಾರ್ಯಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಮೊಯ್ದೀನ್ ಸಾದಿಕ್ ಮತ್ತು ಸಿವಿಲ್ ಅಬಕಾರಿ ಅಧಿಕಾರಿಗಳಾದ ಅಖಿಲೇಶ್, ಧನೇಶ್, ಶ್ರೀನಾಥ್ ಮತ್ತು ಪ್ರಸನ್ನನ್ ಭಾಗವಹಿಸಿದ್ದರು.

ಕುಂಬಳೆ ಪರಿಸರ  ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕಾರ್ಯಚರಣೆ ನಡೆಸುವುದೆಂದು ಅಬಕಾರಿ ಇಲಾಖೆ ತಿಳಿಸಿದೆ.

Post a Comment

0 Comments