Ticker

6/recent/ticker-posts

Ad Code

ಪೊನ್ನೆಪ್ಪಲ ಕೆ ಯಂ ಗೋಪಾಲಕೃಷ್ಣ ಭಟ್ ನಿಧನ

 

ಮುಳ್ಳೇರಿಯ : ಕೆ ಯಂ ಗೋಪಾಲಕೃಷ್ಣ ಭಟ್ ಪೊನ್ನೆಪ್ಪಲ  (84) ನಿಧನರಾದರು. ಕಾರಡ್ಕ ಸಮೀಪ ಪೊನ್ನೆಪ್ಪಲದ ದಿವಂಗತ ನಾರಾಯಣ ಭಟ್ ಅವರ ಹಿರಿಯ ಪುತ್ರರಾಗಿದ್ದ ಕೆ ಎಂ ಗೋಪಾಲಕೃಷ್ಣ ಭಟ್ ವಯೋಸಹಜ ಕಾಯಿಲೆಗಳಿಂದ  ಸೋಮವಾರ ಮಧ್ಯಾಹ್ನ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ಕನ್ನಡ ಹೋರಾಟಗಾರರಾಗಿ ಕನ್ನಡ ಅಂಕಣ ಬರಹಗಾರ ಎಂಬಿತ್ಯಾದಿ ನೆಲೆಗಳಲ್ಲಿ ಕಾಸಗೋಡಿನ ಸಾರಸ್ವತ ಲೋಕದಲ್ಲಿ ಪರಿಚಿತರಾಗಿದ್ದರು. ಪತ್ನಿ  ಭಾಗ್ಯಲಕ್ಷ್ಮಿ ಈ ಹಿಂದೆಯೇ ತೀರಿಕೊಂಡಿದ್ದಾರೆ. ಪುತ್ರ ಸಾಹಿತಿ, ಕನ್ನಡ ಹೋರಾಟಗಾರ ಡಾಕ್ಟರ್ ನರೇಶ್ ಮುಳ್ಳೇರಿಯ, ಸೊಸೆ ದಿವ್ಯ ಗಂಗಾ (ಪಾಂಡಿ ಶಾಲಾ ಮುಖ್ಯ ಶಿಕ್ಷಕಿ). ಸಹೋದರರಾದ ತಿರುಮಲೇಶ್ವರ ಭಟ್(ನಿವೃತ್ತ ಬ್ಯಾಂಕ್ ಅಧಿಕಾರಿ, ವಿಜಯಾ ಬ್ಯಾಂಕ್), ವೆಂಕಟ್ರಮಣ ಭಟ್, ಬಾಲಸುಬ್ರಹ್ಮಣ್ಯ ಭಟ್  ಹಾಗೂ ಅಪಾರ ಬಂಧು, ಮಿತ್ರ ಬಳಗವನ್ನು ಆಗಲಿದ್ದಾರೆ.

Post a Comment

0 Comments