Ticker

6/recent/ticker-posts

Ad Code

ಕರೆನ್ಸಿ ನೋಟು ಬಳಸಿ ಎಂಡಿಎಂಎ ಮಾದಕ ವಸ್ತು ಸೇವನೆ : ಇಬ್ಬರ ಬಂಧನ

 

ಬದಿಯಡ್ಕ : 20 ರೂಪಾಯಿ ನೋಟು ಬಳಸಿ ಎಂಡಿಎಂಎ ಮಾದಕ ವಸ್ತು ಸೇವಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೈಕ ಝಮ್ಸಮ್ ಮಂಜಿಲ್‌ನ ಅಬ್ದುಲ್ ಸನಾಫ್ (37) ಮತ್ತು ಪೈಕ ಬಲದುಕ್ಕ ಅಲ್-ನೂರ್ ಮಂಜಿಲ್‌ನ ಅಹ್ಮದ್ ನಿಜಾಮುದ್ದೀನ್ (26) ಬಂಧಿತರು. ನಿನ್ನೆ (ಭಾನುವಾರ) ರಾತ್ರಿ 9.30 ರ ಸುಮಾರಿಗೆ ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದ ಪೊಲೀಸರು  ಗಸ್ತು ತಿರುಗುತ್ತಿದ್ದಾಗ, ಪೈಕ ಎಕೆಕೆಎಂ ಶಾಲೆಯ ಬಳಿ ಬೀದಿ ದೀಪದ ಕೆಳಗೆ ಕರೆನ್ಸಿ ನೋಟು ಬಳಸಿ ಮಾದಕ ವಸ್ತು ಸೇವಿಸುತ್ತಿದ್ದ  ಯುವಕರನ್ನು ಪೊಲೀಸ್ ತಂಡ ತಡೆದು ಅವರ  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಸ್ಟೇಷನ್  ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments