Ticker

6/recent/ticker-posts

Ad Code

ನೀರ್ಚಾಲಿ‌ನಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಅಶ್ಲೀಲ ಕೈಸನ್ನೆ ಮಾಡಿದ ಯುವಕನ ಬಂಧನ

ಬದಿಯಡ್ಕ: ಶಾಲಾ ವಿಧ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಕೈಗಳಿಂದ ಅಶ್ಲೀಲ ಸನ್ನೆಗಳನ್ನು ತೋರಿಸಿದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಗೋಳಿಯಡ್ಕದ ಶಾಂತಿಪಳ್ಳದ ಅಜ್ಮಲ್ ಇರ್ಷಾದ್ (26) ಎಂದು ಗುರುತಿಸಲಾಗಿದೆ. ನೀರ್ಚಾಲು ಶಾಲೆಗೆ ಬರುವ ವಿದ್ಯಾರ್ಥಿನಿಯರು ಮತ್ತು ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿನ್ನೆ (ಶುಕ್ರವಾರ) ಸಂಜೆ 5 ಗಂಟೆಗೆ ಬೇಳ ವಿ.ಎಂ. ನಗರದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments