Ticker

6/recent/ticker-posts

Ad Code

ನಾಲಂದ ಕಾಲೇಜಿನ ವಿದ್ಯಾರ್ಥಿಗಳಿಂದ ಜಿಲ್ಲಾ ಸಹಕಾರಿ ಆಸ್ಪತ್ರೆ ಅಧ್ಯಯನ ಭೇಟಿ

ಪೆರ್ಲ :  ನಾಲಂದ ಕಾಲೇಜು ಆಫ್ ಆರ್ಟ್ಸ್ ಅಂಡ್ ಸೈನ್ಸ್ ಪೆರ್ಲ  ಕಾಲೇಜಿನ ದ್ವಿತೀಯ ವರ್ಷದ ಬಿ ಎ ಅರ್ಥಶಾಸ್ತ್ರ ವಿದ್ಯಾರ್ಥಿಗಳು ಹಾಸ್ಪಿಟಲ್ ಎಕನಾಮಿಕ್ಸ್ ಪಠ್ಯದ ಅಂಗವಾಗಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆ  ಗೆ ಅಧ್ಯಯನ ಭೇಟಿಯನ್ನು ನಡೆಸಿದರು ಆಸ್ಪತ್ರೆಯ ಕಾರ್ಯಾಚರಣ ಸೂಚಕಗಳನ್ನು ಗಣನೆ ಮಾಡುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿತ್ತು ಆಸ್ಪತ್ರೆಯ ಕಾರ್ಯದರ್ಶಿ, ಪ್ರದೀಪ್ ಹಾಗೂ ಮೆಡಿಕಲ್ ಸುಪರಿಟಂಡ್ಂಟ್  ಸರಸ್ವತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಿದರು ಈ ಅಧ್ಯಯನ ಭೇಟಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಇನ್ ಚಾರ್ಜ್  ಶಂಕರ ಖಂಡಿಗೆ ಹಾಗೂ ಅರ್ಥಶಾಸ್ತ್ರ ಸಹಪ್ರಾಧ್ಯಾಪಕಿ  ಅನುಪಮಾ ಟಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ತಾತ್ವಿಕ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವಾಗಿ ಪರಿಣಮಿಸಿತು

Post a Comment

0 Comments