Ticker

6/recent/ticker-posts

Ad Code

ತ್ಯಾಜ್ಯ ನಿರ್ವಹಣೆ ಅಧ್ಯಯನ ನಡೆಸಲು ಎಣ್ಮಕಜೆ ಪಂಚಾಯತ್‌ಗೆ ಜರ್ಮನ್ ತಂಡ ಭೇಟಿ : ಹರಿತ ಕರ್ಮ ಸೇನೆಯ ಚಟುವಟಿಕೆಯ ಪ್ರಶಂಸಿದ ಕ್ಲೀನ್ ಹಬ್' ಕಂಪನಿ


ಪೆರ್ಲ : ​ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅಧ್ಯಯನ ನಡೆಸುವ ಸಲುವಾಗಿ ಜರ್ಮನಿಯ ನಿಯೋಗವೊಂದು ಎಣ್ಮಕಜೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿತು. ಜರ್ಮನಿಯ 'ಕ್ಲೀನ್ ಹಬ್' ಕಂಪನಿಯ ಪ್ರತಿನಿಧಿಗಳಾದ ಸಿನೋ ಕಾಕುಶ್ಕೆ ಮತ್ತು ಲಿಸಾ ಕೋಸ್ಟರ್ ಅವರನ್ನೊಳಗೊಂಡ ತಂಡವು

ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು. ಪಂಚಾಯತ್ ಕೈಗೊಂಡಿರುವ ಸ್ವಚ್ಛತಾ ಕಾರ್ಯಕ್ರಮಗಳು ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳ ಬಗ್ಗೆ ತಂಡವು ಈ ಸಂದರ್ಭದಲ್ಲಿ ವಿವರವಾದ ಮಾಹಿತಿ ಪಡೆಯಿತು.


ಬಳಿಕ ಹರಿತ ಕರ್ಮಸೇನೆಯ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದ ತಂಡವು, ಅಲ್ಲಿ ನಡೆಯುವ ತ್ಯಾಜ್ಯ ವಿಂಗಡನಾ ಪ್ರಕ್ರಿಯೆಯನ್ನು ನೇರವಾಗಿ ಗಮನಿಸಿತು. ಹರಿತ ಕರ್ಮಸೇನೆಯ ಕಾರ್ಯವೈಖರಿ ಮತ್ತು ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವಿಧಾನವನ್ನು ವಿವರವಾಗಿ ತಿಳಿದುಕೊಂಡ ಬಳಿಕ ಸ್ವತಃ ಸೇನೆಯ ಸದಸ್ಯರೊಂದಿಗೆ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣಾ ಕಾರ್ಯದಲ್ಲಿ ಪಾಲ್ಗೊಂಡರು. ನಂತರ ಪಂಚಾಯತ್‌ನಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಸಂಸ್ಕರಿಸುವ ಅನಂತಪುರ ಕೈಗಾರಿಕಾ ಕೇಂದ್ರದ 'ಗ್ರೀನ್‌ವರ್ಮ್ಸ್' ಪ್ಲಾಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ಎಣ್ಮಕಜೆ ಪಂಚಾಯತ್ ತ್ಯಾಜ್ಯ ನಿರ್ವಹಣೆಯಲ್ಲಿ ತೋರುತ್ತಿರುವ ವಿಶೇಷ ಕಾಳಜಿ ಮತ್ತು ವೈಜ್ಞಾನಿಕ ಕ್ರಮಗಳನ್ನು ಜರ್ಮನ್ ತಂಡವು ಶ್ಲಾಘಿಸಿದೆ. ಈ  ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ, ಉಪಾಧ್ಯಕ್ಷ ಸಿದ್ದೀಕ್ ವಳಮೊಗರು, ಆರೋಗ್ಯ ನಿರೀಕ್ಷಕರು ಹಾಗೂ ಹರಿತ ಕರ್ಮಸೇನೆಯ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments