Ticker

6/recent/ticker-posts

Ad Code

ಕನ್ಯಪ್ಪಾಡಿ ಮುಂಡಿತ್ತಡ್ಕ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೆ ಬಸವಳಿಯುತ್ತಿರುವ ಬಡಪಾಯಿ ಜನತೆ

 

ಕನ್ಯಪ್ಪಾಡಿ : ಬದಿಯಡ್ಕ ಗ್ರಾಮ ಪಂಚಾಯತಿನ ಬೆಳೆಯುತ್ತಿರುವ ಪೇಟೆಗಳಲ್ಲಿ ಒಂದಾದ ಕನ್ಯಪ್ಪಾಡಿ ಮುಂಡಿತ್ತಡ್ಕ ಪ್ರದೇಶಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಕನ್ಯಪ್ಪಾಡಿಯಲ್ಲಿ ಬಸ್ ಸ್ಟ್ಯಾಂಡ್  ಇಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ. ಮಹಿಳೆಯರು ಮತ್ತು ಮಕ್ಕಳು ರಸ್ತೆ ಬದಿ ಮತ್ತು ಅಂಗಡಿಗಳ ಎದುರು  ಬಸ್‌ಗಾಗಿ ಕಾಯಬೇಕಾದ ದುಸ್ಥಿತಿ ಕಂಡು ಬರುತ್ತದೆ. ಮುಂಡಿತ್ತಡ್ಕ ಮಾರ್ಗದಲ್ಲಿ ಪ್ರತಿದಿನ ನೂರಾರು ಪ್ರಯಾಣಿಕರು ಕನ್ಯಪ್ಪಾಡಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದಾರೆ. 

ಇಲ್ಲಿ ಜನತೆ ಮಳೆಯ ಅವಾಂತರ, ಬೇಸಿಗೆಯ ಬಿಸಿಲು ಸಹಿಸಬೇಕಾಗಿದೆ. ಇನ್ನಾದರೂ ಅಧಿಕೃತರು ಈ ಬಗ್ಗೆ ಕಣ್ಣು ತೆರೆಯುವ ಅಗತ್ಯವಿದೆ. ಭರವಸೆ ಮೂಡಿಸಿದ ಬದಿಯಡ್ಕ ಗ್ರಾ.ಪಂ.ಆಡಳಿತದ ನೇತೃತ್ವ ಈ ಬಗ್ಗೆ ಗಮನ ಹರಿಸುವುದೇ ಎಂದು ಜನತೆ ಜಾತಕ ಪಕ್ಷಿಯಂತೆ  ಕಾಯುತ್ತಿದ್ದಾರೆ.

Post a Comment

0 Comments