Ticker

6/recent/ticker-posts

Ad Code

ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವವಕ್ಕೆ ಎಡನೀರು ಶ್ರೀಗಳ ಆಹ್ವಾನ


ಬದಿಯಡ್ಕ : ಕುಂಬಳೆ ಸೀಮೆಯ ಅತಿ ಪುರಾತನ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಎಪ್ರಿಲ್ 17ರಿಂದ 28ವರೆಗೆ ಜರಗಲಿದ್ದು ಇದಕ್ಕಾಗಿ  ಶ್ರೀ ಕ್ಷೇತ್ರ ಜೀರ್ಣೋದ್ಧಾರ -ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ರಕ್ಷಾಧಿಕಾರಿ  ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ಶಂಕರಾಚಾರ್ಯ ಸಂಸ್ಥಾನಮ್ ಎಡನೀರು ಮಠ ಇವರನ್ನು ಆಮಂತ್ರಣ ನೀಡಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರ್, ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯ ನಾರಾಯಣ ಬಿ,ಆಹಾರ ಸಮಿತಿ ಪ್ರಧಾನ ಸಂಚಾಲಕ ಗಣೇಶ ಕೃಷ್ಣ ಅಳಕ್ಕೆ ಉಪಸ್ಥಿತರಿದ್ದರು. ಶ್ರೀಗಳು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಸಂಪೂರ್ಣ ಮಾಹಿತಿ  ಪಡೆದುಕೊಂಡು ಮಾರ್ಗದರ್ಶನ‌ ನೀಡಿದರು.

Post a Comment

0 Comments