Ticker

6/recent/ticker-posts

Ad Code

ಕುಂಬಳೆ ಮೊಗ್ರಾಲ್ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ಫೆಬ್ರವರಿ 19ರಿಂದ 21ರವರೆಗೆ ವರ್ಷಾವಧಿ ನೇಮೋತ್ಸವ

ಕುಂಬಳೆ: ಕಾಸರಗೋಡು ಗಡಿಯಲ್ಲಿರುವ ಕೊನೆಯ ಬಬ್ಬುಸ್ವಾಮಿ ಕ್ಷೇತ್ರವೆಂಬ ಖ್ಯಾತಿಗೆ ಪಾತ್ರವಾಗಿರುವ ಕುಂಬಳೆ ಮೊಗ್ರಾಲ್ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಫೆಬ್ರವರಿ 19ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಫೆಬ್ರವರಿ 19ರಂದು ಬೆಳಿಗ್ಗೆ ಭಂಡಾರ ಏರುವುದರೊಂದಿಗೆ ನೇಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಅದೇ ದಿನ ಬೆಳಿಗ್ಗೆ 11 ಗಂಟೆಗೆ ಜಾಗದ ಗುಳಿಗ ನೇಮ ಹಾಗೂ ರಾತ್ರಿ 9 ಗಂಟೆಗೆ ಮೈಸಂದಾಯ ದೈವದ ನೇಮ ನಡೆಯಲಿದೆ. ಫೆಬ್ರವರಿ 20ರಂದು ಬೆಳಿಗ್ಗೆ 7 ಗಂಟೆಗೆ ಕೋಮರಾಯ ದೈವದ ನೇಮ, ಬೆಳಿಗ್ಗೆ 11 ಗಂಟೆಗೆ ಧರ್ಮದೈವದ ನೇಮ, ಮಧ್ಯಾಹ್ನ 2 ಗಂಟೆಗೆ ಸಂಕಲೆ ಗುಳಿಗ ನೇಮ ಹಾಗೂ ರಾತ್ರಿ 10 ಗಂಟೆಗೆ ಪಂಜುರ್ಲಿ ದೈವದ ನೇಮ ನೆರವೇರಲಿದೆ. ಫೆಬ್ರವರಿ 21ರಂದು ಬೆಳಿಗ್ಗೆ 9.30 ಗಂಟೆಗೆ ಪಿಲಿಚಾಮುಂಡಿ ದೈವದ ನೇಮ ನಡೆಯಲಿದ್ದು, ಅದೇ ದಿನ ರಾತ್ರಿ 9.30 ಗಂಟೆಗೆ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ. ಫೆಬ್ರವರಿ 22ರಂದು ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ. ನೇಮೋತ್ಸವದ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

Post a Comment

0 Comments