Ticker

6/recent/ticker-posts

Ad Code

ಆಸ್ತಿ ಕಬಳಿಸಲು ವಾಕಿಂಗ್ ಸಮಯದಲ್ಲಿ ತಂದೆಯನ್ನೇ ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಕೊಂದ ಮಗ


ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗ ತನ್ನ ತಂದೆಯನ್ನೇ ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಕೊಂದಿರುವ ಘಟನೆ ದೂತನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ  ಮುನಿಕೃಷ್ಣಪ್ಪ (71) ಮೃತಪಟ್ಟ ವ್ಯಕ್ತಿ. ರಾತ್ರಿ ಊಟ ಮುಗಿಸಿ ಸಾಕು ನಾಯಿಯೊಂದಿಗೆ ವಾಕಿಂಗ್ ಹೋಗಿದ್ದ ಮುನಿಕೃಷ್ಣಪ್ಪ ಅವರನ್ನು ಹಿಂಬಾಲಿಸಿದ ಅವರ ಮಗ ಮೋಹನಕುಮಾರ್ (45) ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಘಟನೆ ಬಳಿಕ ಮೋಹನ್ ಸ್ಥಳದಿಂದ ತಲೆ ಮರೆಸಿಕೊಂಡಿದ್ದ. ಸ್ಥಳೀಯರು ಮುನಿಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ತೀವ್ರಗೊಳಿಸಿದ್ದಾರೆ. ಮುನಿಕೃಷ್ಣ ಅವರು ಇಂದಿರಾನಗರ ಮತ್ತು ಸುತ್ತಮುತ್ತಲಿನ ಮೂರು ಕಟ್ಟಡಗಳನ್ನು ಹೊಂದಿದ್ದಾರೆ ಮತ್ತು ಬಾಗೇಪಲ್ಲಿಯಲ್ಲಿ ಜಮೀನು ಹೊಂದಿದ್ದಾರೆ. ಈ ಆಸ್ತಿ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments