Ticker

6/recent/ticker-posts

Ad Code

ಅಡುಗೆಮನೆಯಲ್ಲಿ ತಾಯಿಯ ಶವವನ್ನು ಹೂತು ಹಾಕಿ ಸಮಾಧಿಮೇಲೆ ಒಲೆಕಲ್ಲಿಟ್ಟ ಮಗ

 

ಲಪ್ಪುಳ : ಅಡುಗೆ ಮನೆಯೊಳಗೆ ತಾಯಿಯ ಶವವನ್ನು  ಯಾರಿಗೂ ತಿಳಿಯದಂತೆ  ಹೂತು ಹಾಕಿ ಸ್ವತಃ ಮಗನೇ ಸಮಾಧಿ ಮಾಡಿದ ಘಟನೆ  ಅಲಪ್ಪುಳದಿಂದ ವರದಿಯಾಗಿದೆ. ತುರವೂರಿನ ಮನಕೋಡಂ ಮೂಲದ ರಾಧಾ (75) ಎಂಬವರ ಮೃತದೇಹ ಅಡುಗೆ ಮನೆಯೊಳಗೆ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಅವರ ಶವವನ್ನು ಆಕೆಯ ಮಗ ಗಿರೀಶ್ ಅಡುಗೆಮನೆಯಲ್ಲಿ ಹೂತಿದ್ದಾನೆ. ಗಿರೀಶ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರ ದೂರಿನ ಆಧಾರದ ಮೇಲೆ, ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ, ಇಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರ ತರುವಾಗ ತನ್ನ ತಾಯಿ ಚಲನರಹಿತಳಾಗಿದ್ದಳು ಎಂದು ಗಿರೀಶ್ ಪೊಲೀಸರಿಗೆ ತಿಳಿಸಿದ್ದಾನೆ. ಗಿರೀಶ್  ಪತ್ನಿ ಪತಿಯೊಡನೆ  ಕೋಪಗೊಂಡು ಬೇರೆಡೆ ವಾಸಿಸುತ್ತಿದ್ದಾರೆ. ಗೀರಿಶ್ ತನ್ನ  ಮಕ್ಕಳನ್ನು ಕರೆದು  ಅಜ್ಜಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಮನೆಯೊಳಗೆ ಶವವನ್ನು ಸಮಾಧಿ ಮಾಡಿದ ನಂತರ ಅದರ ಮೇಲೆ ಒಲೆಕಲ್ಲು ಇಟ್ಟ ದುಷ್ಕೃತ್ಯವನ್ನು ಗಿರೀಶ್  ಪತ್ನಿ ನೆರೆಹೊರೆಯವರಿಗೆ ತಿಳಿಸಿದ್ದರು. ಇದರಂತೆ ಸ್ಥಳೀಯರು  ಪೊಲೀಸರಿಗೆ ಮಾಹಿತಿ ನೀಡಿದ್ದರು.

Post a Comment

0 Comments