ತೃಕ್ಕರಿಪ್ಪುರ : ಕರ್ತವ್ಯದ ನಡುವೆ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ವಜ್ರದ ಆಭರಣ ಬಿದ್ದು ಸಿಕ್ಕಿದ್ದು ಅದನ್ನು ತೃಕರಿಪ್ಪುರ ಹರಿತ ಕರ್ಮ ಸೇನೆಯ ಕಾರ್ಯಕರ್ತರು ವಾರೀಸುದಾರರನ್ನು ಪತ್ತೆ ಹಚ್ಚಿ ಹಿಂತಿರುಗಿಸಿ ಮಾದರಿಯಾಗಿದ್ದಾರೆ. ಹರಿತ ಕರ್ಮ ಸೇನೆಯ ಕಾರ್ಯಕರ್ತೆಯರಾದ ಎಂ. ಉಷಾ ಪಲ್ಲತಿಲ್, ಸ್ಮಿತಾ ಥಂಕಯಂ, ಎಂ. ಶೈಲಾ ಉದುಂಪುಂತಲ ಮತ್ತು ಎ. ಪಿ. ಟಿ. ಜುವೈರಿಯಾ ಮೆಟ್ಟಮ್ಮಾಳ್ ಎಂಬವರು ತೃಕ್ಕರಿಪ್ಪುರ ಬಸ್ ನಿಲ್ದಾಣದ ಪಶ್ಚಿಮ ಭಾಗದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದರು. ಈ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿರುವ ಆಭರಣಗಳನ್ನು ನೋಡಿದ್ದು. ಅದು ವಜ್ರ ಎಂದು ತಿಳಿದ ನಂತರ, ಅವರು ಪಂಚಾಯತ್ ಅಧ್ಯಕ್ಷೆ ಸಾಜಿದಾ ಜಫರುಲ್ಲಾ ಮತ್ತು ವಿ. ಇ. ಒ. ರಶೀದ್ ಅವರಿಗೆ ಮಾಹಿತಿ ನೀಡಿದರು. ನಂತರ, ಆಭರಣಗಳ ವಾರೀಸುದಾರರಾದ ವೈದ್ಯರೋರ್ವರಿಗೆ ಹಿಂತಿರುಗಿಸಿದ್ದಾರೆ. ಈ ಮಾದರಿ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

0 Comments